ಪಿಂಚಣಿ ಹೋರಾಟಕ್ಕೆ ಫಲ ಸಿಕ್ಕಿದೆ ; ಹೊಸನಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತೀಶ್

By malnad tech

Published on:

Spread the love

ಹೊಸನಗರ : ಸುಮಾರು ಆರು ತಿಂಗಳಿಂದ ಸಾಮಾಜಿಕ ಭದ್ರತ ಹಣ ಅರ್ಹರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ. ಸಾಮಾಜಿಕ ಭದ್ರತೆಗೆ ಆದಾಯ ಮಿತಿ ₹ 32 ಸಾವಿರದೊಳಗೆ ಮಾಡಿದ್ದು ಯಾವುದೇ ಗ್ರಾಮ ಲೆಕ್ಕಾಧಿಕಾರಿಗಳು ಒಂದು ಕುಟುಂಬಕ್ಕೆ ಆದಾಯಮಿತಿ ₹ 40 ಸಾವಿರದೊಳಗೆ ನೀಡುತ್ತಿಲ್ಲ ಎಂದು ಹೊಸನಗರ ತಾಲ್ಲೂಕಿನಲ್ಲಿ ಬೃಹತ್ ಹೋರಾಟ ನಡೆಸಿದ ಪರಿಣಾಮ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯ ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೊಸನಗರ ಮಂಡಲದ ಅಧ್ಯಕ್ಷ ಸತೀಶ್‌ ತಿಳಿಸಿದರು.

ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್‌ ಪದೆ-ಪದೆ ಪತ್ರಿಕೆಗಳಲ್ಲಿ ಸಾಮಾಜಿಕ ಭದ್ರತೆಯ ಪಿಂಚಣಿ ಹಣ ಅರ್ಹರಿಗೆ ನೀಡುತ್ತಿಲ್ಲ. ಸುಮಾರು ಆರು ತಿಂಗಳಿಂದ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಕಂದಾಯ ಇಲಾಖೆಗೆ ಅಲೆಯುತ್ತಿದ್ದಾರೆ. ಆದಾಯ ಮಿತಿ ₹ 32 ಸಾವಿರದೊಳಗೆ ಇರಬೇಕಂತೆ ಆದರೆ ಗ್ರಾಮ ಆಡಳಿತಾಧಿಕಾರಿಗಳು ಆದಾಯ ಮಿತಿ ₹ 40 ಸಾವಿರ ನೀಡುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಕಣ್ಮುಚ್ಚಿಕೊಂಡು ಕುಳಿತಿವೆ ಎಂದು ಸುದ್ದಿ ಮೂಲಕ ಎಚ್ಚರಿಸಿದರ ಪರಿಣಾಮ ಹಾಗೂ ಮಾಜಿ ಸಚಿವ ಹಾಲಪ್ಪ, ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಹಾಗೂ ಹೊಸನಗರ ತಾಲ್ಲೂಕಿನ ಎಲ್ಲ ಬಿಜೆಪಿ ಕಾರ್ಯಕರ್ತರು ಹೊಸನಗರದಲ್ಲಿ ಈ ಬಗ್ಗೆ ಹೋರಾಟ ನಡೆಸೋಣ ಕಾಂಗ್ರೆಸ್ ಸರ್ಕಾರದ ಕಣ್ಣು ತೆರೆಸೋಣ ಎಂದು ಪ್ರತಿಭಟನೆ ನಡೆಸಿದರ ಪರಿಣಾಮ ರಾಜ್ಯದ ಎಲ್ಲ ಭದ್ರತ ಯೋಜನೆ ಪಡೆಯುತ್ತಿರುವ ಅರ್ಹರಿಗೆ ಅನುಕೂಲವಾಗಿದೆ ಎಂದರು.

Leave a comment