ಹೊಸನಗರ : ಹೊಸನಗರ ಶಾಖೆಯ ಕೆನರಾ ಬ್ಯಾಂಕ್‌ನಿಂದ ಇ-ಕೆವೈಸಿ ಮಾಡಿಸಿ ಎಂದು ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ ಹೊಸನಗರ ಕೆನರಾ ಬ್ಯಾಂಕ್ ಗ್ರಾಹಕರು ಯಾವುದೇ ಕಾರಣಕ್ಕೂ ಮೊಬೈಲ್ ಸಂದೇಶದ ಮೂಲಕ ಯಾವುದೇ ಲಿಂಕ್ ಓಪನ್ ಮಾಡಬೇಡಿ ಎಂದು ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಸಂದೀಪ್ ಎಂ.ಎಂ. ತಿಳಿಸಿದರು.
ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇ-ಕೆವೈಸಿ ನವೀಕರಿಸಿ ಇಲ್ಲವಾದರೆ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಕೆಲವರ ನಕಲಿ ಮೊಬೈಲ್ ಮೂಲಕ ಸಂದೇಶ ಬರುತ್ತಿದ್ದು ಯಾವುದೇ ಕಾರಣಕ್ಕೂ ನಕಲಿ ವಂಚಕರ ಜಾಲಕ್ಕೆ ಬಿದ್ದು ನಿಮ್ಮ ಖಾತೆಯ ಹಣ ಕಳೆದುಕೊಳ್ಳಬೇಡಿ. ನಮ್ಮ ಕೆನರಾ ಬ್ಯಾಂಕ್ ಶಾಖೆಯಿಂದ ಯಾವುದೇ ಮೊಬೈಲ್ ಸಂದೇಶ ಕಳುಹಿಸುವುದಿಲ್ಲ ಎಂದರು.
ನಿಮ್ಮ ಮೊಬೈಲ್‌ಗಳಿಗೆ ಇಂತಹ ಸಂದೇಶ ಬಂದಲ್ಲಿ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡದೆ ನಿಮ್ಮ ಸಮೀಪದ ಕೆನರಾ ಬ್ಯಾಂಕ್ ಶಾಖೆಗೆ ಆಗಮಿಸಿ ನಮ್ಮ ಸಿಬ್ಬಂದಿಗಳೊಂದಿಗೆ ವಿಚಾರಿಸಿ ಎಂದರು.
ಬ್ಯಾಂಕ್‌ಗಳು ಎನ್‌ಬಿಎಫ್‌ಸಿಗಳು ಇ-ಕೆವೈಸಿ ನವೀಕರಣಕ್ಕಾಗಿ ಯಾವುದೇ ಕಾರಣಕ್ಕೂ ಮೊಬೈಲ್ ಮೂಲಕ ಲಿಂಕ್ ಕಳುಹಿಸುವುದಿಲ್ಲ ಇಂಥಹ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ ಅಥವಾ ನಿಮ್ಮ ಒಟಿಪಿ ಪಿನ್ ಮತ್ತು ಪಾಸ್‌ವರ್ಡ್ ಗಳನ್ನು ಯಾರೊಂದಿಗೂ ಮೊಬೈಲ್ ಮೂಲಕ ಹಂಚಿಕೊಳ್ಳಬೇಡಿ ಎಂದು ತಮ್ಮ ಕೆನರಾ ಬಾಂಕ್ ಶಾಖೆಯ ಗ್ರಾಹಕರಿಗೆ ಎಚ್ಚರಿಸಿದರು.







