ಹೊಂಬುಜದಲ್ಲಿ ಮುಕುಟ ಸಪ್ತಮಿ ಆಚರಣೆ ; ಇಂದ್ರಿಯ ನಿಗ್ರಹ, ಕಠೋರ ಧ್ಯಾನ ಪ್ರಚುರಪಡಿಸಿದ ಶ್ರೀ ಪಾರ್ಶ್ವನಾಥ ತೀರ್ಥಂಕರರು – ಶ್ರೀಗಳು

By malnad tech

Published on:

Spread the love

ಹೊಸನಗರ : “ಸನಾತನ ಧರ್ಮದ ಆದ್ಯ ಧರ್ಮಗಳ ಪೈಕಿ ಜೈನ ಧರ್ಮವು 24 ತೀರ್ಥಂಕರರಿಂದ ಜನಮಾನಸದಲ್ಲಿ ಮಾನವೀಯ ಮೌಲ್ಯಗಳನ್ನು, ಅಹಿಂಸಾತ್ಮಕ ಭಾವನೆಯನ್ನು ಬೆಳೆಸುವಂತೆ ಪ್ರೇರಣೆ ನೀಡಿತು” ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಜೈನ ಮಠದ ಪೀಠಾಧೀಶ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತಿಳಿಸಿದರು.

23ನೇಯ ತೀರ್ಥಂಕರರಾಗಿರುವ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೋಕ್ಷಕಲ್ಯಾಣದ ಸುದಿನವನ್ನು ಮುಕುಟ ಸಪ್ತಮಿ ಎಂದೇ ಜೈನ ಧರ್ಮೀಯರು ಆಚರಿಸುತಾರೆ ಎಂದು ಪ್ರವಚನದಲ್ಲಿ ವಿವರಿಸುತ್ತಾ, ‘ಇಂದ್ರಿಯ ನಿಗ್ರಹ ಮತ್ತು ಕಠೋರ ಧ್ಯಾನದ ಮಹತ್ವವನ್ನು ಪ್ರಚುರಪಡಿಸಿದ ಶ್ರೀ ಪಾರ್ಶ್ವನಾಥ ಸ್ವಾಮಿ ಸ್ಮರಣೆಯಿಂದ ಕರ್ಮಕ್ಷಯವಾಗುತ್ತದೆ’ ಎಂದರು.

ಹೊಂಬುಜ ಶ್ರೀಕ್ಷೇತ್ರದ ಅಧಿನಾಯಕ ಶ್ರೀ ಪಾಶ್ವನಾಥ ತೀರ್ಥಂಕರರಾಗಿರುವುದರಿಂದ ಭಕ್ತರು ವಿಶ್ವದೆಲ್ಲೆಡೆಯಿಂದ ದರ್ಶನ ಪಡೆದು ಸಂಕಷ್ಟದಿಂದ ಪರಿಹಾರ ಪಡೆಯುತ್ತಾರೆಂದು ಶ್ರೀಗಳವರು ತಿಳಿಸಿ, ಭಕ್ತರಿಗೆ ಶ್ರೀಫಲ ಮಂತ್ರಾಕ್ಷತೆ ನೀಡಿ ಹರಸಿದರು.

ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಸನ್ನಿಧಿಯಲ್ಲಿ ವಿಶೇಷ ಪೂಜಾ ದ್ರವ್ಯಗಳನ್ನರ್ಪಿಸಲಾಯಿತು. ಶ್ರೀ ಸ್ವರ್ಣ ಪಲ್ಲಕ್ಕಿಯಲ್ಲಿ ಜಿನಬಿಂಬ ಶ್ರೀವಿಹಾರ ನಡೆಸಲಾಯಿತು. ನಿರ್ವಾಣ ಲಾಡು ಸಮರ್ಪಿಸಲಾಯಿತು.

ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂಜಾ ವಿಧಾನ ನೆರವೇರಿಸಲಾಯಿತು. ಶ್ರೀಕ್ಷೇತ್ರದ ಜಿನಮಂದಿರಗಳಲ್ಲಿ ನಿತ್ಯಪೂಜೆ ಸಂದರ್ಭದಲ್ಲಿ ಭಕ್ತರು ಪಾಲ್ಗೊಂಡಿದ್ದರು.

Leave a comment