ಹೊಸನಗರ : ಇಲ್ಲಿನ ಕೋಟೆಗಾರ್ ವಿದ್ಯವರ್ಧಕ ಸಂಘದ ಆವರಣದಲ್ಲಿ ಸಂಘದ ಗೌರವಾಧ್ಯಕ್ಷ ಪಿ.ಆರ್. ಸಂಜೀವ್ ನೇತೃತ್ವದಲ್ಲಿ 80ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಪಿ.ಆರ್. ಸಂಜೀವ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಎಲ್ಲ ಆಡಳಿತ ಮಂಡಳಿ ಸಮಿತಿಯವರು, ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು.
ಹೊಸನಗರ ಚೌಡಮ್ಮ ಆಟೋ ರೀಕ್ಷಾ ಮಾಲೀಕರು & ಸಿಬ್ಬಂದಿ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವ ; ಗಗ್ಗ ಬಸವರಾಜ್ಗೆ ಸನ್ಮಾನ
ಹೊಸನಗರ : ಪಟ್ಟಣದಲ್ಲಿರುವ ಚೌಡಮ್ಮ ಆಟೋ ಮಾಲೀಕರ ಹಾಗೂ ಸಿಬ್ಬಂದಿಗಳ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಸುಧೀಶ್ ನೇತೃತ್ವದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಹಾಗೂ ಖ್ಯಾತ ವಕೀಲ ಗಗ್ಗ ಬಸವರಾಜ್ರನ್ನು ಸಂಘದ ಸದಸ್ಯರು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಆಟೋ ಮಾಲೀಕರು ಹಾಗೂ ಸಿಬ್ಬಂದಿಗಳು, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ಗಜಾನನ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.







