ವಿಶೇಷ ಚೇತನ ಮಕ್ಕಳು ದೇಶದ ಆಸ್ತಿ ; ಬಿಇಒ ಗಣೇಶ್ ವೈ

By malnad tech

Published on:

Spread the love

ಹೊಸನಗರ ; ವಿಶೇಷ ಚೇತನ ಮಕ್ಕಳು ಆಟೋಟಗಳಲ್ಲಿ ಭಾಗವಹಿಸಿ ವಿಶ್ವಕಪ್‌ಗಳನ್ನೇ ಗೆಲ್ಲಿಸಿಕೊಟ್ಟ ಉದಾಹರಣೆಗಳು ನಮ್ಮ ಮುಂದಿದೆ. ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ನಮ್ಮ ಉದ್ದೇಶವೆಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯತಿ ಪಂಚಾಯತಿ ಕುವೆಂಪು ರಂಗಮಂದಿರದ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ, ವಿಶೇಷ ಚೇತನ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೊಸನಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್‌ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ ಸಾರಿಗೆ ಭತ್ಯೆ, ಓದುಗರ ಭತ್ಯೆ, ಹೆಣ್ಣು ಮಕ್ಕಳಿಗೆ ಭತ್ಯೆ, ಬೆಂಗಾವಲು ಭತ್ಯೆ, ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ತಪಾಸಣೆ, ನ್ಯೂನತೆಯ ಅನುಗುಣವಾಗಿ ಸಾಧನ ಸಲಕರಣೆ ಹಾಗೂ ಉದ್ಯೋಗ ನೀಡುವುದು ಇತ್ಯಾದಿ ಸೌಲಭ್ಯಗಳು ವಿಶೇಷ ಚೇತನರಿಗೆ ಸಿಗುತ್ತಿದ್ದು ಇದರ ಉಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕು ಸಮಾಜದ ಮುಖ್ಯ ವಾಹಿತಿಗೆ ಬರಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿ ರಂಗನಾಥ್, ಪ್ರಾಥಮಿಕ ಬಾಲಕರ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ಡಿಸೋಜ, ಅಂಧರ ವಿಶ್ವಕಪ್ ತಂಡದ ವಿಜೇತೆ ಕಾವ್ಯ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಕೇಶ್, ಡಾ.ಶಂಶಾದ್ ಬೇಗಂ ನದಾಫ್, ಡಾ‌. ಸುರೇಶಕುಮಾರ್, ಡಾ. ಬಾನು, ಗುರುಶನ್ ಗುಪ್ತ, ಡಾ. ರಾಜೇಂದ್ರ, ಅನುಶ್, ಡಾ. ಸುರೇಶ್‌ಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ಸಿ.ಆರ್.ಪಿ ಪ್ರದೀಪ್, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ರೇಣುಕೇಶ್, ಇಸಿಓ ಕರಿಬಸಪ್ಪ, ಬಿಐಇಆರ್‌ಟಿ ಉಮೇಶ್, ಬಿಐಇಆರ್‌ಟಿ ಚಂದ್ರಕಾಂತ್, ಸಿ.ಆರ್.ಪಿ ಗಣೇಶ್, ವಾಣಿಶ್ರೀ, ವಿಶೇಷ ಚೇತನ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a comment