ಹೊಸನಗರದಲ್ಲಿ ಮದ್ಯವರ್ಜನ ಶಿಬಿರ | ದುಶ್ಚಟಗಳಿಂದ ದೂರವಿದ್ದು ಸಚ್ಚಾರಿತ್ರ್ಯ ಹೊಂದಿ ಉತ್ತಮ ಪ್ರಜೆಗಳಾಗಿ ಬಾಳಿ ; ಮೂಲೆಗದ್ದೆ ಶ್ರೀ ಕರೆ

By malnad tech

Published on:

Spread the love

ಹೊಸನಗರ ; ಕುಡಿತ ಜೂಜಿನಂತಹ ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುವ ಮೂಲಕ ಕುಟುಂಬ ನಿರ್ವಹಣೆ ಮಾಡಬೇಕೆಂದು ಮೂಲೆಗದ್ದೆ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಕರೆ ನೀಡಿದರು.

ಅವರು ಪಟ್ಟಣದ ಗಾಯತ್ರಿ ಮಂದಿರದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ 2032ನೇ ಹಾಗೂ ಹೊಸನಗರ ತಾಲೂಕಿನ 12ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ದುಶ್ಚಟಗಳ ದಾಸರಾದರೆ ಇಡಿ ಕುಟುಂಬವೇ ಸರ್ವನಾಶವಾಗಲಿದೆ. ದುಶ್ಚಟಗಳಿಗೆ ಬಲಿಯಾದವನಿಗೆ ಸಮಾಜ ಸಹ ಅಸ್ಪೃಶ್ಯರಂತೆ ಕಾಣುತ್ತದೆ. ಆದುದರಿಂದ ಇಡಿಯ ಸಮಾಜ ನಮ್ಮನ್ನು ಗೌರವರಿಂದ ಕಾಣಲು ಸಚ್ಚಾರಿತ್ರ್ಯ ಹೊಂದಬೇಕೆಂದರು.

2032ನೇ ಶಿಬಿರದ ಅಧ್ಯಕ್ಷ ಎನ್ ವಿಜೇಂದ್ರ ಶೇಟ್, ಜಿಲ್ಲಾ ಜನಜಾಗೃತಿ ವೇದಿಕೆಯ ಎನ್.ಆರ್ ದೇವಾನಂದ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ರಾಜ್ಯ ಸಂಘಟನೆ ಅಧ್ಯಕ್ಷ ನಟರಾಜ ಬಾದಾಮಿ, ಸಿಪಿಐ ಗೌಡಪ್ಪಗೌಡ, ವಕೀಲ ಸಂಘಟನೆಯ ಅಧ್ಯಕ್ಷ ಮೋಹನ್ ಜಿ ಶೆಟ್ಟಿ, ಜನಜಾಗೃತಿ ವೇದಿಕೆಯ ನಾಗರತ್ನ ದೇವರಾಜ್, ಶಶಿಕಲಾ ಮಲ್ಲಪ್ಪ, ಬೆಂಗಳೂರಿನ ಉದ್ಯಮಿ ಮಹೇಂದ್ರ, ಶಿಬಿರಾಧಿಕಾರಿಗಳಾದ ಕುಮಾರ್ ಟಿ, ಯೋಜನಾಧಿಕಾರಿ ನಾಗರಾಜ್ ಕುಲಾಲ್, ಆರೋಗ್ಯ ಸಹಾಯಕಿ ಸೌಮ್ಯ, ಮೇಲ್ವಿಚಾರಕಿ ಉಮಾ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಯೋಜನಾಧಿಕಾರಿ ಆರ್ ಪ್ರದೀಪ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕ ಗಣಪತಿ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.

Leave a comment