ಹೊಸನಗರ ನೆಹರು ಕ್ರೀಡಾಂಗಣದ ಉಸ್ತುವಾರಿ ಅಧಿಕಾರಿಯಾಗಿ ವಿನಯ್ ಹೆಗಡೆ ಕರ್ಕಿ ನೇಮಕ

By malnad tech

Published on:

Spread the love

ಹೊಸನಗರ ; ತಾಲ್ಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದ ಉಸ್ತುವಾರಿ ಅಧಿಕಾರಿಯನ್ನಾಗಿ ಹೊಸನಗರ ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕರಾದ ವಿನಯ್ ಹೆಗಡೆ ಕರ್ಕಿಯವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್ ಆದೇಶ ಮಾಡಿದ್ದಾರೆ.

ಕ್ರೀಡಾಂಗಣ ಸ್ವಚ್ಛತೆಯೇ ಮೊದಲ ಆದ್ಯತೆ ;

ಹೊಸನಗರ ನೆಹರು ಕ್ರೀಡಾಂಗಣಕ್ಕೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಹೊಸನಗರ ತಾಲ್ಲೂಕಿನಲ್ಲಿಯೇ ಅತ್ಯುತ್ತಮ ಕ್ರೀಡಾಂಗಣ ಇದಾಗಿದ್ದು ಪ್ರತಿದಿನ ನೂರಾರು ಜನರು ವಾಕಿಂಗ್‌ಗಳಿಗೆ ಬರುತ್ತಾರೆ. ಎಲ್ಲದಕ್ಕೂ ಕ್ರೀಡಾಂಗಣ ಸ್ವಚ್ಛವಾಗಿರಬೇಕು. ಶೌಚಾಲಯ ನಿರ್ಮಾಣವಾಗುತ್ತಿದೆ. ನೀರಿನ ವ್ಯವಸ್ಥೆ ಶೀಘ್ರದಲ್ಲಿ ಮಾಡುತ್ತೇವೆ. ಹೆಚ್ಚಿನ ಆದ್ಯತೆಯನ್ನು ಸ್ವಚ್ಚತೆಗೆ ನೀಡುವುದಾಗಿ ವಿನಯ್ ಹೆಗಡೆ ತಿಳಿಸಿದ್ದಾರೆ.

Leave a comment