ರಿಪ್ಪನ್‌ಪೇಟೆ ; ರಾಜ್ಯ ಕಾರ್ಮಿಕರ ಪರಿಷತ್ತು ಕಛೇರಿಯನ್ನು ಶಿವಮೊಗ್ಗ ರಸ್ತೆಯ ಕಟ್ಟಡದಲ್ಲಿ ರಾಜ್ಯಾಧ್ಯಕ್ಷ ಡಾ. ರವಿಶೆಟ್ಟಿ ಬೈಂದೂರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಹೋರಾಟ ಅನ್ಯಾಯದ ವಿರುದ್ಧ ಎಂದು ಹೇಳುವ ಮೂಲಕ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಿ.ಎಸ್.ಟಿ ವ್ಯಾಪ್ತಿಯಲ್ಲಿ ಬೇಕರಿಯವರನ್ನು ಸೇರಿಸುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯಲು ಮುಂದಾಗಿದ್ದಾಗ ಅದರ ವಿರುದ್ಧ ರಾಜ್ಯ ವ್ಯಾಪ್ತಿ ಕರೆಕೊಟ್ಟ ಹಿನ್ನಲೆಯಲ್ಲಿ ಲಕ್ಷಾಂತರ ಬೇಕರಿಯವರು ಸಂಘಟಿತರಾಗಿ ಸಾಗರೋಪಾದಿಯಲ್ಲಿ ರಾಜಧಾನಿಗೆ ಮುತ್ತಿಗೆ ಹಾಕುವ ಸನ್ನಿವೇಶವನ್ನು ಕಂಡು ಸರ್ಕಾರ ಆ ಕಾಯ್ದೆಯನ್ನು ಹಿಂಪಡೆಯುವ ಮೂಲಕ ನ್ಯಾಯಕೊಡಿಸಿರುವುದು ಸ್ಮರಿಸಬಹುದಾಗಿದೆ. ಆ ಕಾರಣ ಸಂಘಟಿತ ಹೋರಾಟದಿಂದ ನಮ್ಮ ಹಕ್ಕು ಪಡೆಯಲು ಸಹಕಾರಿಯಾಗುವುದೆಂದು ಹೇಳಿ ಕಟ್ಟಡ ಕಾರ್ಮಿಕರು ಟೈರ‍್ಸ್ ಹೋಟೆಲ್ ಇನ್ನಿತರ ಕಾರ್ಮಿಕರಿಗೆ ಅನ್ಯಾಯವಾದರೆ ಅವರ ಪರ ನಿಲುವುದಾಗಿ ರಾಜ್ಯಾಧ್ಯಕ್ಷ ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಪರಿಷತ್ ಮುಖಂಡರು ಸುರೇಂದ್ರ ಶೆಟ್ಟಿ, ಶೈಲೇಶ್ ಪೂಜಾರಿ ಕೋಟಾ, ಮಣಿಕಂಠ, ಶಿವಮೊಗ್ಗ ಜಿಲ್ಲಾ ಕಾರ್ಮಿಕರ ಪರಿಷತ್ ಉಪಾಧ್ಯಕ್ಷ ಮಂಜುನಾಥ, ಅಧ್ಯಕ್ಷ ಹೆಚ್.ಜೆ.ನಾಗೇಶ, ಮಹಿಳಾ ಘಟಕದ ಅಧ್ಯಕ್ಷೆ ಹೆಚ್.ಜಿ.ವೇದಾವತಿ, ನಿರ್ದೇಶಕರಾದ ಗೀತಾ ಅಣ್ಣಪ್ಪ, ಸುಶೀಲ ಕೆ, ಸೀತಾರಾಜಪ್ಪ, ಚಂದ್ರು ಗುಳುಗುಳಿಶಂಕರ, ಮಂಜುನಾಥ ಚಿಲುಮನೆಜಡ್ಡು ಇನ್ನಿತರರು ಇದ್ದರು.







