ಮುಂಬಾರು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ  ನಿರ್ದೇಶಕರಾಗಿ ಶ್ರೀಪಾದ್ ಆಯ್ಕೆ

By malnad tech

Published on:

Spread the love

ಹೊಸನಗರ ; ತಾಲೂಕಿನ ಕಸಬಾ ಹೋಬಳಿ ಮುಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಂಬಾರು ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶ್ರೀಪಾದ್ ಆಯ್ಕೆಯಾದರು. 

ತಮ್ಮ ಪ್ರತಿಸ್ಪರ್ಧಿ ಟೀಕಪ್ಪ ಅವರನ್ನು ಸುಮಾರು 79 ಮತಗಳ ಅಂತರದಿಂದ ಸೋಲಿಸಿ ವಿಜಯಶಾಲಿಯಾಗಿದ್ದಾರೆ. 

ಶ್ರೀಪಾದ್ ಒಟ್ಟು 120 ಮತಗಳನ್ನು ಪಡೆದರೆ ಟೀಕಪ್ಪ 39 ಮತ ಪಡೆದರು. ಕಳೆದ ಕೆಲವು ತಿಂಗಳ ಹಿಂದೆ ಸಂಘದ ನಿರ್ದೇಶಕರಾಗಿದ್ದ ಲೇಖನಮೂರ್ತಿ ನಿಧನದಿಂದ ಸ್ಥಾನ ತೆರವಾಗಿತ್ತು. ಶನಿವಾರ ನಡೆದ ಚುನಾವಣೆಯಲ್ಲಿ ಶ್ರೀಪಾದ್ ಆಯ್ಕೆಯಾದರು.

ಈ ವೇಳೆ ಮುಂಬಾರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹುಲಗಾರು ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ, ನಿವೃತ್ತ ಎಎಸ್ಐ ಮಂಡಾನಿ ಲೋಕೇಶ್ವರ ಸೇರಿದಂತೆ ಹಲವರು ಹಾಜರಿದ್ದು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

Leave a comment