ಹೊಸನಗರ ಹೋಲಿ ರಿಡೀಮರ್ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ: ಪಟ್ಟಣದ ಪ್ರತಿಷ್ಟಿತ ಶಾಲೆ ಮತ್ತು ಕಾಲೇಜ್‌ಗಳಲ್ಲಿ ಒಂದಾಗಿರುವ ಹೋಲಿ ರಿಡೀಮರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 53ಕ್ಕೆ 53 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ಶೇ. 100ರಷ್ಟು ಫಲಿತಾಂಶ ಬಂದಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ 17 ವಿದ್ಯಾರ್ಥಿಗಳು, ಪಿಯುಸಿಯಲ್ಲಿ 42 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹೋಲಿ ರಿಡೀಮರ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಐರಿನ್ ಡಿಸಿಲ್ವಾ, ದ್ವಿತೀಯ ಪಿಯುಸಿ ಎಂಬುವುದು ವಿದ್ಯಾರ್ಥಿಗಳಿಗೆ ಒಂದು ಘಟ್ಟವಾಗಿದ್ದು ದ್ವಿತೀಯ ಪಿಯುಸಿ ನಂತರ ವಿದ್ಯಾರ್ಥಿಗಳ ಜೀವನ ಶೈಲಿ ಬದಲಾವಣೆಯಾಗುತ್ತದೆ. ಈ ಘಟ್ಟದಲ್ಲಿ ತಪ್ಪು ದಾರಿ ತುಳಿಯದೇ ತಮ್ಮ ಮುಂದಿನ ಭವಿಷ್ಯದ ಕಡೆ ಚಿಂತಿಸಿದರೆ ಒಳ್ಳೆಯದು. ನೀವು ಈ ಘಟ್ಟದಲ್ಲಿ ತಪ್ಪು ದಾರಿ ಹಿಡಿದರೇ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಉತ್ತಮ ಉದ್ಯೋಗ ಪಡೆಯಲು ಅಸಾಧ್ಯವಾಗುತ್ತದೆ. ತಮ್ಮ ಜೀವಿತಾವಧಿಯಲ್ಲಿ ಸುಖ ಸಂತೋಷದಿಂದ ಬಾಳಿ ಬದುಕಲು ಅಸಾಧ್ಯವಾದ ಮಾತಾಗುತ್ತದೆ. ವಿದ್ಯಾರ್ಥಿಗಳು ನಿಮ್ಮ ಮುಂಧಿನ ಭವಿಷ್ಯ ರೂಪಿಸಿಕೊಳ್ಳಬೇಕಾದರೇ ಇಂದೇ ದಿಟ್ಟ ನಿರ್ಧಾರ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಬೇಕು ಹಾಗೂ ನೀವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಈ ದೇಶ ಈ ಭಾಷೆ ಇದರ ಜೊತೆಗೆ ನೀವು ಓದಿರುವ ಶಾಲೆ ಕಲಿಸಿದ ಶಿಕ್ಷಕರನ್ನು ಮರೆಯಬೇಡಿ ಎಂದರು.

ಈ ಸನ್ಮಾನ ಸಮಾರಂಭದಲ್ಲಿ ಪ್ರಮೋದ್, ಗುರುರಾಜ್, ಸುರೇಶ್, ಭೋಜರಾಜ್, ಪ್ರಜ್ವಲ್, ಪ್ರಜ್ಞಾ, ಅನನ್ಯ, ಸುಷ್ಮಾ, ವಿನೂತ, ದೀಪ, ಸಿಸ್ಟರ್ ರೋಝಿಠ, ರಾಮಕೃಷ್ಣ, ದನಂಜಯ್, ಶಾರದ, ಸುಪ್ರೀಯ, ರಶ್ಮಿ, ರೂಪ, ನಿಕಿತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!