ಮೈಲುತುತ್ತ, ರಸಗೊಬ್ಬರ ಅನಧಿಕೃತ ಮಾರಾಟಗಾರರ ವಿರುದ್ಧ ಕ್ರಮ ; ಸಚಿನ್ ಹೆಗಡೆ

Written by Malnadtimes.in

Updated on:

WhatsApp Group Join Now
Telegram Group Join Now

ಹೊಸನಗರ: ತಾಲ್ಲೂಕಿನಲ್ಲಿ ವಿವಿಧ ಭಾಗಗಳಲ್ಲಿ ಮುಂಗಾರಿನ ಸಂದರ್ಭದಲ್ಲಿ ಅನಧಿಕೃತವಾಗಿ ಮೈಲುತುತ್ತ ಹಾಗೂ ರಸಗೊಬ್ಬರ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಬೇಕಾಗಿದ್ದು ತಕ್ಷಣ ಇಂತಹ ಮಾರಾಟಗಾರರ ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಇಲ್ಲಿನ ಸಹಾಯಕ ಕೃಷಿ ಅಧಿಕಾರಿ ಸಚಿನ್ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಕೆಲವು ವರ್ಷಗಳಿಂದ ಮುಂಗಾರು ಸಂದರ್ಭದಲ್ಲಿ ದಿನಸಿ ಅಂಗಡಿ, ಹಾರ್ಡ್‌ವೇರ್ ಅಂಗಡಿ, ಗೂಡಂಗಡಿ ಮಾಲೀಕರು ಅನಧಿಕೃತವಾಗಿ ಮೈಲುತುತ್ತ ಇತರೆ ರಸಗೊಬ್ಬರ, ಕೀಟನಾಶಕಗಳನ್ನು ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲದೇ ಕೆಲವು ಮಾರಾಟಗಾರರು ಯಾವುದೇ ಬಿಲ್ ಇಲ್ಲದೇ ರೈತರ ಮನೆಗಳಿಗೆ ನೇರವಾಗಿ ಮೈಲುತುತ್ತ, ರಸಗೊಬ್ಬರಗಳನ್ನು ಸರಬರಾಜು ಮಾಡುತ್ತಿರುವುದು ಕಂಡು ಬಂದಿದೆ. ಕೆಲವರ ಮೇಲೆ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೈಲುತುತ್ತ ಹಾಗೂ ರಸಗೊಬ್ಬರ ಮಾರಾಟ ಮಾಡುವ ಅಂಗಡಿಯವರು ಹಾಗೂ ಮನೆ-ಮನೆಗೆ ಮಾರಾಟ ಮಾಡುವವರು ಕೃಷಿ ಇಲಾಖೆಯಿಂದ ಅಧಿಕೃತ ಲೈಸನ್ಸ್ ಪಡೆದುಕೊಂಡು ಮಾರಾಟ ಮಾಡಲಿ. ನಮ್ಮ ಇಲಾಖೆಯದೇನು ಅಭ್ಯಂತರವಿಲ್ಲ. ಕೃಷಿ ಇಲಾಖೆಯಿಂದ ಸೂಕ್ತ ಲೈಸನ್ಸ್ ಪಡೆಯದೇ ಅನಧಿಕೃತವಾಗಿ ಮಾರಾಟ ಮಾಡುವುದು ಕೀಟನಾಶಕ ಅಧಿ ನಿಯಮ 1971 ಹಾಗೂ ರಸಗೊಬ್ಬರಗಳ ನಿಯಂತ್ರಣ ಆದೇಶ 1985ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದ್ದು ಅಗತ್ಯ ಕ್ರಿಮಿನಲ್ ಕಾಯ್ದೆಯಡಿಯಲ್ಲಿ ಜಾಮೀನು ರಹಿತ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಆದ್ದರಿಂದ ಮೇಲಿನ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಲ್ಲಿ ಇಲಾಖೆಯಿಂದ ನಿಯಮನುಸಾರ ಸೂಕ್ತ ಪರವಾನಗಿ ಪಡೆಯಬೇಕು ಪರವಾನಗಿಯಿಲ್ಲದೆ ಮಾರಾಟ ಮಾಡುವ ಮಾರಾಟಗಾರರಿಂದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಸೂಕ್ತ ಕಾನೂನು ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೊಸನಗರ ತಾಲ್ಲೂಕಿನ ರೈತರು ಯಾವುದೇ ಕಾರಣಕ್ಕೂ ಮನೆ-ಮನೆಗೆ ಬರುವ ಮೈಲುತುತ್ತ-ಹಾಗೂ ರಸಗೊಬ್ಬರಗಳನ್ನು ಖರೀದಿಸಬೇಡಿ. ನೀವು ಯಾವುದೇ ಅಂಗಡಿಯಲ್ಲಿ ಖರೀದಿಸಿದರೇ ಅವರಿಂದ ಅಧಿಕೃತ ನಗದು ಬಿಲ್ ಪಡೆದುಕೊಳ್ಳಿ. ಆದಷ್ಟು ಅಧಿಕೃತ ಅಂಗಡಿಗಳಲ್ಲಿ ರಸಗೊಬ್ಬರ ಖರೀದಿಸಿ ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.

Read More

ರಾಷ್ಟ್ರೀಯ ಡೆಂಗೀ ದಿನ – 2024 | ಸೊಳ್ಳೆ ನಿಯಂತ್ರಣದಿಂದ ಡೆಂಗೀ ರೋಗ ತಡೆಗಟ್ಟೋಣ ; ಸ್ನೇಹಲ್ ಸುಧಾಕರ ಲೋಖಂಡೆ ಕರೆ=

ಧರ್ಮ ಜಾಗೃತಿಗಾಗಿ ‘ಶ್ರೀಶೈಲ ಜಗದ್ಗುರುಗಳ ನಡಿಗೆ ಮಲೆನಾಡ ಕಡೆಗೆ’ ಉತ್ತಮ ಸ್ಪಂದನೆಕೊಟ್ಟಿಗೆಯಲ್ಲಿದ್ದ ನಾಗರಹಾವು ಸುರಕ್ಷಿತವಾಗಿ ಸೆರೆ

ಅಡಿಕೆ ಗೊನೆಗೆ ಔಷಧಿ ಸಿಂಪಡಿಸುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು !

Leave a Comment

error: Content is protected !!