ಹೊಸನಗರ ; ಸಾಹಿತ್ಯ ಲೋಕವನ್ನು ಕರ್ನಾಟಕ ರಾಜ್ಯಕ್ಕೆ, ದೇಶ, ಹೊರದೇಶಗಳಿಗೆ ಪರಿಚಯಿಸುವುದರ ಜೊತೆಗೆ ಇಂದಿನ ತಲೆಮಾರಿಗೆ ಸಾಹಿತ್ಯ ಲೋಕದ ರುಚಿ ತೋರಿಸಿರುವ ನಗರ ಸಾಹಿತಿ ಅಂಬ್ರಯ್ಯಮಠ ಹಾಗೂ 34 ವರ್ಷಗಳ ಕಾಲ ಪತ್ರಿಕಾ ವಿತರಕನಾಗಿ ಕಾರ್ಯ ನಿರ್ವಹಿಸಿರುವ ಹಾಗೂ ಪತ್ರಕರ್ತರ ಸಂಘದ ಹೊಸನಗರ ತಾಲೂಕು ನೂತನ ಅಧ್ಯಕ್ಷ ಹೆಚ್.ಎಸ್. ನಾಗರಾಜ್ ಮತ್ತು ಸುಮಾರು 35 ವರ್ಷಗಳ ಕಾಲ ರಿಪ್ಪನ್‌ಪೇಟೆಯ ಸಹಕಾರಿ ಸಂಘದ ಸದಸ್ಯರಾಗಿ ಹಾಗೂ 25 ವರ್ಷಗಳಿಂದ ಸೊಸೈಟಿಯ ಅಧ್ಯಕ್ಷರಾಗಿ, ಸಹಕಾರಿರತ್ನ ಪ್ರಶಸ್ತಿ ಪಡೆದ ಎಂ.ಎಂ ಪರಮೇಶ್ ಶಿವಮೊಗ್ಗದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾ. 14ರಂದು ಶನಿವಾರ ಸಂಜೆ ಸನ್ಮಾನಿಸಲಾಗುತ್ತಿದೆ ಎಂದು ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








