ಹೊಸನಗರ ; ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು ನೂರು ವರ್ಷಗಳು ಸಂದ ಹಿನ್ನಲೆಯಲ್ಲಿ ಇದೇ ಅಕ್ಟೋಬರ್ 11ರ ಶನಿವಾರ ಮಧ್ಯಾಹ್ನ 3-45ಕ್ಕೆ ಪಟ್ಟಣದಲ್ಲಿ ನೂರಾರು ಗಣವೇಶಧಾರಿಗಳಿಂದ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ.
ಇಲ್ಲಿನ ದ್ಯಾವರ್ಸದ ಅಶೋಕ ರೈಸ್ ಮಿಲ್ ಆವರಣದಿಂದ ನಗರ ಮತ್ತು ಕಸಬಾ ಹೋಬಳಿ ಸ್ವಯಂ ಸೇವಕರ ಗಣವಸ್ತ್ರಧಾರಿಗಳ ತಂಡ ಮಧ್ಯಾಹ್ನ 3-45ಕ್ಕೆ ಹಿಂದೂ ದೇಶ ಪರ ವಿವಿಧ ಘೋಷಣೆಗಳೊಂದಿಗೆ ಪಟ್ಟಣ ನೆಹರು ರಸ್ತೆ ಮೂಲಕ ಸಾಗಿ ಹಳೆ ಕೋರ್ಟ್ ಸರ್ಕಲ್ ತಲುಪುತ್ತದೆ.
ಕೆರೆಹಳ್ಳಿ ಹಾಗು ಹಂಚ ಹೋಬಳಿ ಸ್ವಯಂ ಸೇವಕರ ತಂಡ ಮಾವಿನಕೊಪ್ಪ ವೃತ್ತದಿಂದ ಶಿವಮೊಗ್ಗ ರಸ್ತೆ ಮೂಲಕ ಸಾಗಿ ಬಂದು ಏಕಕಾಲಕ್ಕೆ ಹಳೆ ಕೋರ್ಟ್ ಸರ್ಕಲ್ ನಲ್ಲಿ ಎರಡೂ ತಂಡಗಳು ಸಮ್ಮಿಲನಗೊಂಡು ಬಳಿಕ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯುವ ಬೃಹತ್ ಗಣವಸ್ತ್ರಧಾರಿಗಳ ಸಮಾವೇಶದಲ್ಲಿ ಒಟ್ಟಾಗಿ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಸಾಮರಸ್ಯ ಗತಿ ವಿಧಿ ಸಹ ಸಂಯೋಜಕ ಜಿ.ವಿ.ರಾಜೇಶ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ತಾಲೂಕು ಪ್ರಮುಖ್ ನಾಗರಾಜ್ ಕೋರಿದ್ದಾರೆ.