ರಿಪ್ಪನ್‌ಪೇಟೆ : ಹೊಸನಗರದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ರಿಪ್ಪನ್‌ಪೇಟೆಯ ರಾಮಕೃಷ್ಣ ವಿದ್ಯಾಲಯ ತನ್ನ ಅದ್ಭುತ ಕ್ರೀಡಾ ಸಾಧನೆಯಿಂದ ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಭಾಜನವಾಗಿದೆ.
ಶಾಲೆಯ ವಿದ್ಯಾರ್ಥಿಗಳು ತೋರಿದ ಶ್ರೇಷ್ಠ ಕ್ರೀಡಾ ಪ್ರದರ್ಶನ ಹೀಗಿದೆ :
- ಬಾಲಕರ ಕಬಡ್ಡಿ – ಪ್ರಥಮ ಸ್ಥಾನ
- ಬಾಲಕಿಯರ ಕಬ್ಬಡ್ಡಿ – ಪ್ರಥಮ ಸ್ಥಾನ
- ಬಾಲಕಿಯರ ರಿಲೇ ಓಟ – ದ್ವಿತೀಯ ಸ್ಥಾನ
- ಸೋನಾಲಿ – 100 ಮೀ. ಓಟದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ಪ್ರಥಮ
- ಆಯುಶ್ರೀ – 600 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲಲ್ಲಿ ತೃತೀಯ
- ಹೇಮಂತ್ – 100 ಮೀ. ಓಟದಲ್ಲಿ ದ್ವಿತೀಯ
- ನಿಶ್ಚಿತ್ – 400 ಮೀ. ಓಟದಲ್ಲಿ ತೃತೀಯ
ಈ ಸಾಧನೆಯೊಂದಿಗೆ ರಾಮಕೃಷ್ಣ ವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ತೋರಿದ ಹೋರಾಟ ಮನೋಭಾವ, ಶಿಸ್ತು, ಹಾಗೂ ತಂಡಭಾವನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದು, “ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ಇದೇ ರೀತಿಯ ಸಾಧನೆ ಮುಂದುವರಿಯಲಿ” ಎಂದು ಶುಭ ಹಾರೈಸಿದ್ದಾರೆ.