ಮುಳಗೇರಿಯ ಶ್ರೀ ಕೊಮಾರಮ್ಮ, ಶ್ರೀ ಕುದುರೆ ಬೀರಪ್ಪ, ಶ್ರೀ ನಾಗದೇವರ ಪುನರ್ ಪ್ರತಿಷ್ಠಾಪನೆ

By malnad tech

Published on:

Spread the love

ಹೊಸನಗರ : ತಾಲೂಕು ಎಲ್ ಗುಡ್ಡೆಕೊಪ್ಪದ ಮುಳಗೇರಿಯಲ್ಲಿ ಶ್ರೀ ಕೊಮಾರಮ್ಮ ಶ್ರೀ ಕುದುರೆ ಬೀರಪ್ಪ ಶ್ರೀ ನಾಗದೇವರ ವಿಗ್ರಹ ಪ್ರತಿಷ್ಠಾಪನೆ ಸಂಭ್ರಮದಿಂದ ನೆರೆದಿದ್ದ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಶ್ರೀ ಕೋಮಾರಮ್ಮ, ಶ್ರೀ ಕುದುರೆ ಬೀರಪ್ಪ ಮತ್ತು ಸಹಪರಿವಾರ ದೇವರ ನೂತನ ಆಲಯ ಹಾಗೂ ವಿಗ್ರಹ ಪುನರ್ ಪ್ರತಿಷ್ಠಾಪನೆ ಅಂಬಾರಗೊಡ್ಲು ಚಕ್ರಪಾಣಿ ಭಟ್ಟರ ಪುರೋಹಿತ್ಯದಲ್ಲಿ ಪ್ರತಿಷ್ಠಾಪನೆ ಚಿಲುಮೆಜೆಡ್ಡು ಶಿವನಾಗ ಕ್ಷೇತ್ರದ ಶ್ರೀ ರಮೇಶ್ ನಾಗ ಪಾತ್ರಿಗಳಿಂದ ನಾಗದರ್ಶನ, ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಗೋಪುರ ಶಿಖರ ಕಲಶ ಪ್ರತಿಷ್ಠಾಪನೆ ನೆರವೇರಿತು.

ಮೂಲೆಗದ್ದೆ ಮಠದ ಶ್ರೀಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಬಿ ಸ್ವಾಮಿರಾವ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ರಾಜೇಶ್, ಮಾಜಿ ಸದಸ್ಯ ಅಶೋಕ್, ಚಿನ್ನಪ್ಪ, ರಾಷ್ಟ್ರೀಯ ಕ್ರೀಡಾಪಟು ಎಂ.ಪಿ ಸುವರ್ಣ, ವಕೀಲ ಬಸವರಾಜ ಗಗ್ಗ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಓಂಕಾರಪ್ಪ, ಜಯನಗರ ಪ್ರಹ್ಲಾದ್ ಮೊದಲಾದವರು ಈ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕು.ಸ್ಪಂದನ ಪ್ರಾರ್ಥಿಸಿದರು. ಕು. ಲತಾ ಸ್ವಾಗತಿಸಿದರು. ವಾಸುದೇವ ಪ್ರಾಸ್ತಾವಿಕ ನುಡಿ ನುಡಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

Leave a comment