ಪಂಚ ಗ್ಯಾರಂಟಿ ಬಡವರ ಪಾಲಿನ ಅಕ್ಷಯ ಪಾತ್ರೆ ; ಹೆಚ್.ಎಂ. ಮಧು

By malnad tech

Published on:

Spread the love

ಶಿವಮೊಗ್ಗ ; ಸರ್ಕಾರದ ಜನಪರ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸರ್ಕಾರ ನೀಡುವ ಪಂಚ ಗ್ಯಾರಂಟಿಗಳು ಬಡವರ ಮತ್ತು ಮಧ್ಯಮ ವರ್ಗದವರ ಪಾಲಿಗೆ ಅಕ್ಷಯ ಪಾತ್ರೆಯಾಗಿದೆ ಎಂದು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ ಮಧು ಹೇಳಿದರು.

ಶನಿವಾರ ನಗರದ ತಾಲ್ಲೂಕು ಪಂಚಾಯತ್‌ನಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಡವರು, ಮಧ್ಯಮ ವರ್ಗದವರು ಹಾಗೂ ಮಹಿಳೆಯರು ಇನ್ನೂ ದೇಶದಲ್ಲಿ ಆರ್ಥಿಕವಾಗಿ, ಸಾಮಾಜಿವಾಗಿ ಹಿಂದುಳಿದಿದ್ದಾರೆ. ಅವೆಲ್ಲರನ್ನೂ ಸಬಲರನ್ನಾಗಿ ಮಾಡಿ ಸಮಾಜದ ಮುಖ್ಯಭೂಮಿಕೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿದೆ. ಅದರಲ್ಲಿ ಮುಖ್ಯವಾಗಿ ಪಂಚ ಗ್ಯಾರಂಟಿ ಯೋಜನೆಗಳು ಸಮಪರ್ಕವಾಗಿ ಜಾರಿ ಆಗಿದ್ದು, ಇದರಿಂದ ರಾಜ್ಯದಲ್ಲಿ ಅದೆಷ್ಟೋ ಬಡವರು, ಮಧ್ಯಮ ವರ್ಗದವರು ಹಾಗೂ ಮಹಿಳೆಯರಿಗೆ ಫಲವನ್ನು ಪಡೆದು ನೆಮ್ಮದಿಯಿಂದಿದ್ದಾರೆ. ಇದರಂತೆ ಜಿಲ್ಲೆಯ ತಾಲ್ಲೂಕಿನಲ್ಲೂ ಕೂಡ ತಾಲ್ಲೂಕು ಮಟ್ಟದ ಪ್ರಾಧಿಕಾರದಿಂದ ಇದನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.

ಸರ್ಕಾರದ ಜನಪರ ಕಾಳಜಿಯಿಂದ ಹಾಗೂ ಅಭಿವೃದ್ದಿ ಉದ್ದೇಶದಿಂದ ಈಡೇರಿಸಲು ಅಧಿಕಾರಿಗಳ ಒಳಗೊಂಡಂತೆ ತಾಲ್ಲೂಕು ಮಟ್ಟದ ಪ್ರಾಧಿಕಾರದ ಸದಸ್ಯರುಗಳು ಕಾರ್ಯಕ್ಷಮತೆಯಿಂದ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದವರೆಗೂ ಮೀಸಲಾಗಿದೆ. ಜನರಿಗೆ ಆದಷ್ಟು ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಯತ್ನದಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ಆಗ ಮಾತ್ರ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಅಗಸ್ಟ್-2025 ರ ಮಾಹೆಯಲ್ಲಿ ಜಿಲ್ಲೆಯ 1,07,655 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗಿದೆ. ಇನ್ನೂ 2044 ಖಾತೆಗಳು ಐಟಿ/ಜಿಎಸ್‌ಟಿ ಫಲಾನುಭವಿಗಳಿದ್ದು, ಇದರಲ್ಲಿ 304 ಅರ್ಜಿಗಳನ್ನು ಕಚೇರಿ ಸ್ವೀಕರಿಸಲಾಗಿದೆ. ಹಾಗೂ ಎನ್‌ಪಿಸಿಐ ಯಲ್ಲಿ 300 ಫಲಾನುಭವಿಗಳು ಬಾಕಿ ಇದೆ.

ಅನ್ಯಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ಸಚಿವ ಸಂಪುಟದಲ್ಲಿ ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದ್ದು, ಇನ್ನೂ ಮುಂದೆ 5 ಕೆಜಿ ಅಕ್ಕಿ ಹಾಗೂ ಇನ್ನೂ 5 ಕೆಜಿ ಅಕ್ಕಿ ಬದಲಾಗಿ ಆಹಾರಧಾನ್ಯಗಳ ಕಿಟ್ ನೀಡಲಿದೆ. ಈ ಯೋಜನೆ ಜನವರಿ-2026 ರಿಂದ ಜಾರಿಯಾಗಲಿದೆ.

ಈಗಾಗಲೇ ಸರ್ಕಾರದ ಆದೇಶದಂತೆ ಐಟಿ ಹೊಂದಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಬೇಕೆಂದು ಆದೇಶ ಮಾಡಲಾಗಿದ್ದು, ಅದರಂತೆ 1.20 ಲಕ್ಷ ಆದಾಯ ಹೊಂದಿರುವ 1,562 ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡ್‌ಗಳಾಗಿ ಮಾರ್ಪಾಡು ಮಾಡಲಾಗುತ್ತದೆ. ಇನ್ನೂ 7,716 ಕಾರ್ಡ್ಗಳು ಬಾಕಿ ಉಳಿದಿವೆ. ಹಾಗೂ ಹೊಸ ಪಡಿತರ ಚೀಟಿಗೆ 208 ಅರ್ಜಿಗಳು ಬಂದಿದ್ದು, ಅದನ್ನು ಪರಿಶೀಲಿಸಿ ಅನುಮೋದಿಸಲಾಗುತ್ತದೆ.

ಅನ್ನ ಸುವಿಧ ಯೋಜನೆಯಡಿ ಸರ್ಕಾರ 75 ವರ್ಷ ದಾಟಿದ ವ್ಯಕ್ತಿಗಳಿಗೆ ಮನೆಯ ಬಾಗಿಲಿಗೆ ಅಕ್ಕಿಯನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದೆ. ಪ್ರತಿ ತಿಂಗಳು 6 ರಿಂದ 15 ತಾರೀಖು ಒಳಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆಯಡಿ ತಾಲ್ಲೂಕು ಮಟ್ಟದಲ್ಲಿ 7.51 ಕೋಟಿ ವಿದ್ಯುತ್ ಬಳಕೆ ಮಾಡಲಾಗಿದ್ದು, ಸರ್ಕಾರದಿಂದ 6.34ಕೋಟಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಯುವ ನಿಧಿ ಯೋಜನೆ ಅಡಿಯಲ್ಲಿ ಜುಲೈ-2025 ಮಾಹೆಯವರೆಗೂ 2,95,03,500 ಕೋಟಿ ಹಣವನ್ನು ವಿದ್ಯಾರ್ಹತೆಯನುಸಾರವಾಗಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 7 ಕೋಟಿ ಮಹಿಳಾ ಫಲಾನುಭವಿಗಳು ಪ್ರಯಾಣ ಮಾಡಿದ್ದು, ಇದರಿಂದ 276 ಕೋಟಿ ಆದಾಯ ಸರ್ಕಾರ ಖಜಾನೆ ಬಂದಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಸಿಓ ಪರಮೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಶಿವಾನಂದ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯ ಟಿ.ಸಿ ಜಯಪ್ಪ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯರುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a comment