ತೀರ್ಥಹಳ್ಳಿ : ಕಾಂಗ್ರೆಸ್‌ನ ಹಿರಿಯ ನಾಯಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಈಡಿಗ ಸಂಘದ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮುಂಡಿಗೆಮನೆ ಡಿ. ಲಕ್ಷ್ಮಣ್ ವಯೋಸಹಜ ಕಾಯಿಲೆಯಿಂದ ಶನಿವಾರ ನಿಧನರಾದರು.
ಪಾರ್ಥಿವ ಶರೀರವನ್ನು ತೀರ್ಥಹಳ್ಳಿಯ ಸೀಬಿನಕೆರೆಯ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ಅಂತ್ಯಸಂಸ್ಕಾರ ಭಾನುವಾರ ಬೆಳಗ್ಗೆ 10.00 ಗಂಟೆಗೆ ಹುಟ್ಟೂರು ಮುಂಡಿಗೆಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದಿಂದ ತಿಳಿದುಬಂದಿದೆ.
ಲಕ್ಷ್ಮಣ್ ರವರ ಅಗಲಿಕೆಗೆ ರಾಜಕೀಯ ಗಣ್ಯರು, ಬಂಧುಗಳು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.