ಹೊಸನಗರ ; ಹುಂಚ ಹೋಬಳಿಯಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರು ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಜನ್ಮ ದಿನಾಚರಣೆಯ ಅಂಗವಾಗಿ ಹುಂಚ ಸರ್ಕಾರಿ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಿದರು.
ಈ ಸಂದರ್ಭದಲ್ಲಿ ಹುಂಚ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಗುರುರಾಜ್ ಸುಣಕಲ್ಲು, ಹುಂಚ ಘಟಕದ ಅಧ್ಯಕ್ಷ ಕೇಶವಮೂರ್ತಿ, ರಮೇಶ್ ಸುಣ್ಣದಬಸ್ತಿ, ಯಶಸ್ವತಿ ಜೈನ್, ಗುರು ಭಂಡಾರಿ, ಪುಂಡಲೀಕ, ರಾಜು, ಶೆಟ್ಟಿಬೈಲು, ಗಿರೀಶ, ಮಂಜುನಾಥ, ನಾಗರಾಜ ರೆಡ್ಡಿ, ದಿನೇಶ, ಚಿನ್ನು, ರತ್ನಾಕರ, ಉಮೇಶ, ಕೃಷ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.







