ಹೊಸನಗರ ; ತಾಲ್ಲೂಕು ವಕೀಲರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ ವಕೀಲರ ದಿನಾಚರಣೆ ಆಚರಿಸಲಾಗಿದ್ದು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಾಲು, ಹಣ್ಣು, ಬ್ರೇಡ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ವಕೀಲರಾದ ಹಿರಿಯಪ್ಪ, ವಾಲೆಮನೆ ಶಿವಕುಮಾರ್, ವೈ.ಪಿ ಮಹೇಶ್, ಉಮೇಶ್, ವಿಜಯ್ ಹೊಳ್ಳಗದ್ದೆ, ಮಂಡಾನಿ ಗುರು, ಗಗ್ಗ ಬಸವರಾಜ್, ಗುರುಕಿರಣ್, ಲೋಕೇಶ್, ಮಂಜುನಾಥ್ ಶ್ರೇಷ್ಠಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.







