ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಜಂಬಳ್ಳಿಯ ಬಂಡಿಯಮ್ಮ ದೇವಿಯ ಕಾರ್ತಿಕ ದೀಪೋತ್ಸವವು ವಿಜೃಂಭಣೆಯೊಂದಿಗೆ ಜರುಗಿತು.
ಬೇಡಿದ ವರವನ್ನು ಈಡೇರಿಸುವ ತಾಯಿ ಬಂಡಿಯಮ್ಮ ದೇವಿಯಲ್ಲಿ ಹರಕೆ ಮಾಡಿಕೊಂಡರೆ ವರ್ಷದೊಳಗೆ ಪರಿಹಾರ ಕಲ್ಪಿಸುತ್ತಾಳೆಂಬ ನಂಬಿಕೆ ಇಲ್ಲಿನ ಭಕ್ತರದಾಗಿದೆ.
ಬಾಳೆ, ಕಬ್ಬಿನಸುಳಿ, ಮಾವಿನ ತೋರಣದೊಂದಿಗೆ ಹೂವಿನಿಂದ ಹಿಂದಿನ ಕಾಲದ ಕಲ್ಲಿನ ಎರಡು ಚಕ್ರದ ಬಂಡಿಯನ್ನು ಅಲಂಕರಿಸಿ ಆ ಬಂಡಿಯಲ್ಲಿ ಅಮ್ಮನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ಆಚರಿಸಿಕೊಂಡು ಬಂದಂತಹ ಪದ್ದತಿಯಾಗಿದೆ.
ಪೂಜೆಯ ನಂತರ ದೇವಿಗೆ ಹಣ್ಣು-ಕಾಯಿ ಸಮರ್ಪಿಸಿ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆಯೊಂದಿಗೆ ಅನ್ನಸಂತರ್ಪಣೆ ಜರುಗಿತು.
ಗಾಯಿತ್ರಿ ಮುರುಗೇಂದ್ರಪ್ಪಗೌಡ, ಶಿವಪ್ಪಗೌಡರು, ಜೆ.ಎಂ.ಶಾಂತಕುಮಾರ, ಜಯಪ್ಪ ಸಂಪಳ್ಳಿ, ಜೆ.ಜಿ.ಸದಾನಂದ, ಕಮಲಾಕ್ಷ, ಸಹನ ಶಾಂತಕುಮಾರ, ಐಶ್ವರ್ಯ, ಇಂದ್ರಮ್ಮ ಹುಗುಡಿ, ರೇಣುಕಾಸದಾನಂದ ಸಾಗರ, ನಾಗವೇಣಮ್ಮ, ಪರಮೇಶ್ವರಪ್ಪ, ಜೆ.ಎನ್.ನಾಗಭೂಷಣ, ಶಾಂತಮ್ಮ, ಅರ್ಚನಾ ವೀರೇಂದ್ರ, ಮೈತ್ರಿ ಕಮಲಾಕ್ಷ, ಶಿವಲಿಂಗೇಶ ಶರತ್, ಜೆ.ಜೆ.ನಟರಾಜ್, ನಾಗೇಂದ್ರ ಎಡಗುಡ್ಡೆ, ಗೀರೀಶ ಎಡಗುಡ್ಡೆ, ಸುಧಾಂಶ, ರಾಜು ಹುಗುಡಿ, ಉದಯ್ ರಮೇಶಗೌಡ, ಇನ್ನಿತರರು ಹಾಜರಿದ್ದರು.







