ಅಕ್ರಮ ಸಾಗುವಾನಿ ಮರದ ತುಂಡುಗಳ ಸಾಗಾಟ ; ಮಾಲು ಸಮೇತ ಆರೋಪಿಗಳ ಬಂಧನ !

By malnad tech

Published on:

Spread the love

ಮೂಡಿಗೆರೆ ; ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕತ್ತರಿಸಿ ಸಾಗಿಸುತ್ತಿದ್ದ ಕಳ್ಳರ ಮೇಲೆ ಅರಣ್ಯ ಇಲಾಖೆಯ ಮಿಂಚಿನ ಕಾರ್ಯಾಚರಣೆ ನಡೆದಿದೆ.

ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತಿಬೈಲು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುಹಾಸ್ ಅವರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಖಚಿತ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ, ಮಾರುತಿ ಓಮ್ನಿ ವಾಹನವನ್ನು ಬೆನ್ನಟ್ಟಿ ತಡೆದು ಪರಿಶೀಲನೆ ನಡೆಸಲಾಗಿದ್ದು, ಅದರಲ್ಲಿ ಅಕ್ರಮವಾಗಿ ಕತ್ತರಿಸಲಾದ 05 ಸಾಗುವಾನಿ ತುಂಡುಗಳು ಪತ್ತೆಯಾಗಿವೆ.

ಸದ್ಯ ವಾಹನ ಹಾಗೂ ಸಾಗುವಾನಿ ದಿಮ್ಮಿಗಳನ್ನು ಜಪ್ತಿ ಮಾಡಲಾಗಿದ್ದು, ಮೂರು ಮಂದಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸುಹಾಸ್ ಅವರೊಂದಿಗೆ ಅರಣ್ಯ ರಕ್ಷಕರಾದ ಲಕ್ಷ್ಮಣ, ಗಿರೀಶ್ ಮತ್ತು ಸುಧೀರ್ ಶ್ರಮಿಸಿ ಇದ್ದರು‌

ಕಾರ್ಯಾಚರಣೆಯ ದಕ್ಷತೆಯನ್ನು ಪರಿಗಣಿಸಿ, ಅರಣ್ಯ ಇಲಾಖೆಯ ವತಿಯಿಂದ ಸುಹಾಸ್ ಹಾಗೂ ಅವರ ತಂಡಕ್ಕೆ ಉತ್ತೇಜನಕಾರಿ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗಿದೆ.

ಮೂಡಿಗೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ ಹಾಗೂ ವಲಯ ಅರಣ್ಯಾಧಿಕಾರಿ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ನಡೆದ ಈ ಮಿಂಚಿನ ದಾಳಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಸಾಗುವಾನಿ ಕಳ್ಳತನಕ್ಕೆ ತಡೆಯೊಡ್ಡುವಂತೆ ಮಾಡಿದೆ.

Leave a comment