ಹೊಂಬುಜ ಶ್ರೀಗಳ ಜನ್ಮದಿನದ ಸಂದೇಶ | ಸರ್ವರೂ ಕ್ಷೇಮಾಭ್ಯುದಯದ ಧಾರ್ಮಿಕ ಪ್ರಜ್ಞಾವಂತರಾಗಬೇಕು

Written by Malnadtimes.in

Updated on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ : ಭಾರತೀಯ ಧಾರ್ಮಿಕ ಸಂಸ್ಕಾರ, ಧರ್ಮ ಸಂದೇಶ, ತೀರ್ಥಂಕರರ, ಯಕ್ಷಯಕ್ಷಿಯರ ವೃತ್ತಾಂತಗಳು ಧರ್ಮ ಪಾಠದ ಮೂಲವಾಗಿದೆ. ವಿಶ್ವದ ಇತರ ಧರ್ಮಗಳ ಉಪದೇಶಗಳಿಗಿಂತ ಸರಳ, ಸಾತ್ವಿಕ ಭೋಧನೆಯನ್ನು ಜೈನ ಧರ್ಮ ಸಾರಿದೆ ಎಂದು ಹೊಂಬುಜ ಜೈನ ಮಠದ (Hombuja Jainmath) ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ತಮ್ಮ ಜನ್ಮದಿನದ ಶುಭದಿನದಂದು ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಮರ್ಪಿಸಿ ಭಕ್ತರನ್ನು ಉದ್ದೇಶಿಸಿ ಪ್ರವಚನವಿತ್ತರು.

ಸರ್ವರೂ ಕ್ಷೇಮಾಭ್ಯುದಯದ ಧಾರ್ಮಿಕ ಪ್ರಜ್ಞೆಯಿಂದ ಕರ್ತವ್ಯ ನಿರ್ವಸಬೇಕು. ವೈಯಕ್ತಿಕ ಜೀವನ ದಾರಿ ಸುಗಮವಾದಂತೆ ರಾಜ್ಯ, ರಾಷ್ಟ್ರ ಅಭ್ಯುದಯದ ಶಿಖರಪ್ರಾಯ ಆಗುತ್ತದೆ ಎನ್ನುವ ಧರ್ಮ ಸಂದೇಶ ನೀಡಿ ಹರಸಿದರು.

ಹುಂಚ ಜೈನ ಸಮಾಜ ಬಾಂಧವರು, ಪರವೂರ ಭಕ್ತರು, ಶ್ರೀ ಮಠದ ಸೇವಕಾಂಕ್ಷಿ ಸಿಬ್ಬಂದಿ ವರ್ಗದವರು ಪೂಜ್ಯ ಸ್ವಾಮೀಜಿಯವರಿಗೆ ಶ್ರೀಫಲ ಅರ್ಪಿಸಿದರು. ದೇಶ ವಿದೇಶಗಳ ಭಕ್ತರು ಶ್ರೀಗಳ ಜನ್ಮದಿನದ ಭಕ್ತಿಪೂರ್ವಕ ಶುಭ ಸಂದೇಶ ಕಳಿಸಿದ್ದರು.

Read More :Rain Alert | ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ,…

Leave a Comment

error: Content is protected !!