ಹೊಸನಗರ ಸ್ಪೋಟ್ಸ್ ಅಸೋಸಿಯೇಷನ್‌ ಕ್ಲಬ್ ಅಧ್ಯಕ್ಷರಾಗಿ ಗುಬ್ಬಿಗ ಅನಂತರಾವ್ ಮುಂದುವರಿಕೆ

By malnad tech

Published on:

Spread the love

ಹೊಸನಗರ ; ಇಲ್ಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಪೋಟ್ಸ್ ಅಸೋಸಿಯೇಷನ್ ಕ್ಲಬ್ ಅಧ್ಯಕ್ಷರನ್ನಾಗಿ ಗುಬ್ಬಿಗಾ ಅನಂತರಾವ್‌ರವರು ಮುಂದುವರೆಸಲಾಗಿದೆ.
ಹೊಸನಗರದ ಸ್ಪೋಟ್ಸ್ ಅಸೋಸಿಯೇಷನ್‌ ಕ್ಲಬ್ ಆವರಣದಲ್ಲಿ ಸರ್ವ ಸದಸ್ಯರ ಸಭೆಯನ್ನು ನಡೆಸಲಾಗಿದ್ದು ಸರ್ವಸದಸ್ಯರ ಸಭೆಯ ನಿರ್ಣಯದಂತೆ ಕೆಲವು ನಿರ್ದೇಶಕರನ್ನು ಕೈ ಬಿಟ್ಟು ನೂತನವಾಗಿ ಕೆಲವು ನಿರ್ದೇಶಕರನ್ನಾಗಿ ತೆಗೆದುಕೊಳ್ಳಲು ಸರ್ವನುಮತದಿಂದ ಅಧ್ಯಕ್ಷರಿಗೆ ಅನುಮೋದನೆ ದೊರಕಿದ್ದು ಅದರಂತೆ ಹೊಸ ನಿರ್ದೇಶಕರನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸ್ಪೋಟ್ಸ್ ಅಸೋಸಿಯೇಶನ್ ಕ್ಲಬ್ ಗೌರವಾಧ್ಯಕ್ಷರಾಗಿ ಪರಮೇಶ್ವರರಾವ್, ಅಧ್ಯಕ್ಷರಾಗಿ ಗುಬ್ಬಿಗ ಅನಂತರಾವ್, ಉಪಾಧ್ಯಕ್ಷರಾಗಿ ಬಿ.ಆರ್. ಪ್ರಭಾಕರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ. ಸುರೇಶ್, ಖಜಾಂಚಿಯಾಗಿ ಬಿ.ಎಸ್ ಸುರೇಶ್, ನಿರ್ದೇಶಕರಾಗಿ ಬಿ.ಎಂ. ಶ್ರೀಧರ, ಎಂ.ವಿ. ಸುರೇಶ್, ಹೆಚ್.ಬಿ. ಸತ್ಯನಾರಾಯಣ, ಎಂ.ಎಸ್. ಶ್ರೀಕಾಂತ, ಕೆ.ಬಿ. ಸತೀಶ್ ಕುಮಾರ್, ಬಿ.ಎನ್ ಮಹೇಂದ್ರ, ಚಿಕ್ಕಮಣತಿ ಹಾಲಪ್ಪ, ವಾಲೆಮನೆ ನಾಗೇಶ್, ರಘುಶೆಟ್ಟಿ, ಸುತ್ತಾ ರಾಘವೇಂದ್ರ, ಮಂಜುನಾಥ್ ಎಂ ಆಯ್ಕೆ ಮಾಡಲಾಗಿದ್ದು ಸಂಸ್ಥೆಯ ವ್ಯವಸ್ಥಾಪಕರಾಗಿ ಕಟ್ಟೆ ಸುರೇಶ್ ಹಾಗೂ ಸಹಚರರಾಗಿ ಕೃಷ್ಣಮೂರ್ತಿ ಮುಂದುವರೆಯಲಿದ್ದಾರೆ.

Leave a comment