ರಿಪ್ಪನ್‌ಪೇಟೆ ; ಪಟ್ಟಣದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಡಿಸೆಂಬರ್ 7 ರಿಂದ 14 ರವರೆಗೆ ಗೃಹ ಸಂಪರ್ಕ ಅಭಿಯಾನದ ನಿಮಿತ್ತ ಹೊಸನಗರ ತಾಲೂಕಿನ ಪ್ರತಿ ಮನೆ ಮನೆಗೆ ಕಾರ್ಯಕರ್ತರು ಭೇಟಿ ನೀಡಿ ಆರ್.ಎಸ್.ಎಸ್ ವಿಚಾರಧಾರೆಗಳನ್ನು ಮತ್ತು 100 ವರ್ಷದ ಸಾಧನೆಯನ್ನು ಮುಟ್ಟಿಸಲಿದ್ದೇವೆ ಎಂದು ತಾಲೂಕು ಕಾರ್ಯವಾಹ ಅಶ್ವಥ್ ತಿಳಿಸಿದರು.
ಭಾರತ ಮಾತೆಗೆ ಪುಷ್ಪಾರ್ಚನೆಯ ನಂತರ ಕರಪತ್ರ, ಭಾರತ ಮಾತೆ ಭಾವಚಿತ್ರ ಬಿಡುಗಡೆಗೊಳಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಆರ್.ಟಿ ಗೋಪಾಲ್, ಆಟೋ ಪ್ರಕಾಶ್ , ಸುರೇಶ್ ಸಿಂಗ್, ತಾಲೂಕು ಪ್ರಚಾರ ಪ್ರಮುಖ್ ಮಹೇಶ್,ದೇವರಾಜ್.ಎಂ, ಎನ್.ಸತೀಶ್, ಆನಂದ ಮೆಣಸೆ, ಪಿ. ರಮೇಶ್, ಪದ್ಮಾ ಸುರೇಶ್, ನಾಗರತ್ನ, ಅಶ್ವಿನಿ ರವಿಶಂಕರ್, ಜಂಬಳ್ಳಿ ಗಿರೀಶ್, ಮಂಜು ಆಚಾರ್, ಸುಧೀಂದ್ರ ಪೂಜಾರಿ, ಮಲ್ಲಿಕಾರ್ಜುನ, ಗಣೇಶ್, ಸಂತೋಷ್, ರಾಘು ಮತ್ತಿತರರಿದ್ದರು.







