ಮಳಲಿಮಠ ಗುರುನಾಗಭೂಷಣ ಶ್ರೀಗಳ ಆಶೀರ್ವಾದ ಪಡೆದ ಹರತಾಳು ಹಾಲಪ್ಪ

By malnad tech

Published on:

Spread the love

ರಿಪ್ಪನ್‌ಪೇಟೆ ; ಮಳಲಿಮಠದ ಶ್ರೀ ನಾಗಾರ್ಜುನಸ್ವಾಮಿ ಮತ್ತು ಶ್ರೀ ರೇಣುಕಾ ಮಂದಿರಕ್ಕೆ ಮಾಜಿ ಸಚಿವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು.

ನಂತರ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆಯುವ ಮೂಲಕ ಗುರುಗಳನ್ನು ಗೌರವಿಸಿದರು.

ಕೆಲಸಮಯ ಸ್ವಾಮೀಜಿಯವರೊಂದಿಗೆ ರಾಜಕೀಯದ ಕುರಿತು ಚರ್ಚಿಸಿ ಮಠದ ಅಭಿವೃದ್ದಿ ಕಾರ್ಯಗಳ ಬಗ್ಗೆ ಹಾಗೂ ನವೆಂಬರ್ 4 ರಂದು ನಡೆಯುವ ಕಾರ್ತಿಕ ದೀಪೋತ್ಸವದ ಪೂರ್ವ ಸಿದ್ದತೆಯ ಕುರಿತು ಸಮಗ್ರ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಮುಖಂಡರಾದ ಪೂರ್ಣೇಶ್ ಕೋಣಂದೂರು, ಮಂಗಳ ಗೋಪಿ, ಮೆಣಸೆ ಆನಂದ್, ಗಿರೀಶ್ ಗುಳ್ಳೊಳ್ಳಿ, ಮಲ್ಲಿಕಾರ್ಜುನ, ರಾಜೇಶ್ ಜೈನ್, ಮುರುಗೇಂದ್ರ, ರುದ್ರಪ್ಪ, ಎನ್.ವರ್ತೇಶ್ ರಿಪ್ಪನ್‌ಪೇಟೆ, ಕಗ್ಗಲಿ ಪುಟ್ಟಸ್ವಾಮಿಗೌಡ, ಕೊಳವಳ್ಳಿ ರಮೇಶ್, ಇನ್ನಿತರರು ಹಾಜರಿದ್ದರು.

Leave a comment