ರಿಪ್ಪನ್‌ಪೇಟೆ ; ಕಠಿಣ ಪರಿಶ್ರಮದಿಂದ ಮಾತ್ರ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ರಾಜು ಎನ್.ಪಿ ಹೇಳಿದರು.
ಈಚೆಗೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಅಂಧರ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾಗವಹಿಸಿ ಗೆಲುವಿಗೆ ಕೈಜೋಡಿಸಿ ಭಾರತ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಕಾವ್ಯಾ ವಿ. ರವರನ್ನು ಅಭಿನಂದಿಸಿ ಶುಭ ಹಾರೈಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯಲ್ಲಿ ತನ್ನದೇಯಾದ ಒಂದು ಪರಿಶ್ರಮ ಇದ್ದಾಗಲೇ ಇಂತಹ ಸಾಧನೆಗಳು ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ನಾಗಾರ್ಜುನ ಸ್ವಾಮಿ, ಜಗದೀಶ್ ಕಾಗಿನೆಲೆ, ಮಹೇಶ್ ಆಚಾರ್ ಮತ್ತಿತರರು ಇದ್ದರು.







