ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸೂಕ್ತ ಕಾನೂನು ನೆರವು ಪಡೆಯಿರಿ ; ವಕೀಲ ವೈ.ಪಿ ಮಹೇಶ್

By malnad tech

Published on:

Spread the love

ಹೊಸನಗರ ; ಮಹಿಳೆಯರ ಮೇಲಿನ ದೌರ್ಜನ್ಯ ಹಿಂದಿನಿಂದಲ್ಲೂ ನಡೆಯುತ್ತ ಬರುತ್ತಿದ್ದು ಅದಕ್ಕೆ ಸೂಕ್ತ ಕಾನೂನು ನೆರವು ಪಡೆಯಬೇಕೆಂದು ಹೊಸನಗರದ ಖ್ಯಾತ ವಕೀಲ ವೈ.ಪಿ. ಮಹೇಶ್‌ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಕಾನೂನು ಪ್ರಾಧಿಕಾರಿ ಸಮಿತಿ ಹಾಗೂ ತಾಲ್ಲೂಕು ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿದರು.

ಮಹಿಳೆಯರ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಿದ್ದರೂ ಅವರಿಗೆ ಕಾನೂನಿನ ಅರಿವು ಇಲ್ಲದೆ ಪುರುಷರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹೆಣ್ಣು ಮಗು ಹೊಟ್ಟೆಯಲ್ಲಿರುವಾಗಲೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಯಲು ಪ್ರಾರಂಭವಾಗುತ್ತದೆ. ಭ್ರೂಣ ಹತ್ಯೆಯಂಥಹ ಪ್ರಕರಣಗಳು ನಡೆಯುತ್ತಿದೆ. ಅತ್ತೆ ಮನೆಯವರ ಕಾಟ ವರದಕ್ಷಿಣೆ ಕಿರುಕುಳ ಪ್ರಕರಣಗಳು ಇನ್ನೂ ಜೀವಂತವಾಗಿದ್ದು ಇವುಗಳನ್ನು ಹೊಗಲಾಡಿಸಲು ಮಹಿಳೆಯರು ಮುಂದೆ ಬರಬೇಕು ಹಾಗೂ ಕಾನೂನಿನ ಅರಿವು ಇದ್ದಾಗ ಮಾತ್ರ ಇಂತಹ ಪ್ರಕರಣ ತಡೆಯಬಹುದು ಎಂದರು.

ಪೋಕ್ಸೋ ಪ್ರಕರಣದ ಬಗ್ಗೆ ಮಾತನಾಡಿ, ಹೆಣ್ಣು ಮಕ್ಕಳಿಗೆ 18 ವರ್ಷದ ಒಳಗೆ ಮದುವೆ ಮಾಡಬಾರದು, 18 ವರ್ಷದೊಳಗೆ ಮಕ್ಕಳ ಮನಸ್ಸು ಬಿಳಿಯ ಹಾಳೆ ಇದ್ದು ಹಾಗೇ ಪ್ರೌಢ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿರುತ್ತದೆ. ಅವರಿಗೆ ಯಾರು ಏನೇ ಮಾಡಿದರೂ ಯಾವುದೇ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಪಡಿಸಿದರೂ ಅರ್ಥವಾಗುವುದಿಲ್ಲ. ಇದನ್ನು ಸೂಕ್ಷ್ಮವಾಗಿ ಪೋಷಕರು ಗಮನಿಸಿ ತೊಂದರೆಗಳನ್ನು ಮಹಿಳಾ ಸಾಂತ್ವನ ಕೇಂದ್ರಗಳಿಗೆ ಅಥವಾ ಕಾನೂನು ಪಾಧಿಕಾರ ಸಮಿತಿಯ ಗಮನಕ್ಕೆ ತಂದರೆ ಉಚಿತವಾಗಿ ಕಾನೂನು ನೆರವು ನೀಡಲಾಗುವುದು ಹಾಗೂ ಗೌಪ್ಯವಾಗಿ ವಿಚಾರಣೆ ನಡೆಸಲಾಗುವುದು ಎಂದರು.

ವಕೀಲ ರಾಮಪ್ಪ ಮಹಿಳ ದೌರ್ಜನ್ಯ ತಡೆಯುವ ಬಗ್ಗೆ ಮಾಹಿತಿ ನೀಡಿದರು. ಹೊಸನಗರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಹಾಗೂ ವ್ಯವಸ್ಥಾಪಕ ಪವನ್‌ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿದರು.

ತಾಲ್ಲೂಕು ಪಂಚಾಯತಿ ಮಂಜುನಾಥ್, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸುಮಾರು 200ಕ್ಕಿಂತಲ್ಲೂ ಹೆಚ್ಚು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a comment