ವ್ಯಾಸ ಮಹರ್ಷಿ ಗುರುಕುಲದಿಂದ ನಾಳೆ 14ನೇ ಉಚಿತ ನೇತ್ರ ತಪಾಸಣೆ, ಮಸೂರ ಅಳವಡಿಕೆ ಶಿಬಿರ

By malnad tech

Published on:

Spread the love

ಹೊಸನಗರ ; ಹರಿದ್ರಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯದಿಂದ ನಾಳೆ (ಜ. 22ರಂದು) ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಮಸೂರ ಅಳವಡಿಕೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಮತ್ತು ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ನೇತೃತ್ವದಲ್ಲಿ ನಡೆಯುತ್ತಿರುವ 14ನೇ ನೇತ್ರ ಶಿಬಿರ ಇದಾಗಿದ್ದು, ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ.

ದಿವಂಗತ ಬಸವನ ಬ್ಯಾಣದ ಅಯ್ಯಪ್ಪನವರು ಹಾಗೂ ದಿವಂಗತ ಹಾಲಸ್ವಾಮಿ ಬಿ.ಎಂ. ಇವರ ಸ್ಮರಣಾರ್ಥವಾಗಿ ಪ್ರತಿ ವರ್ಷ ನೇತ್ರ ಶಿಬಿರ, ರಕ್ತದಾನ ಶಿಬಿರ, ಹಾಗೂ ಆರೋಗ್ಯ ಶಿಬಿರಗಳನ್ನು ಶ್ರೀ ವ್ಯಾಸ ಮಹರ್ಷಿ ಗುರುಕುಲ ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ಈ ವರ್ಷ ಪ್ರಾಥಮಿಕ ಅರೋಗ್ಯ ಕೇಂದ್ರ ಹರಿದ್ರಾವತಿ ಹಾಗೂ ಗ್ರಾಮ ಪಂಚಾಯಿತಿ ಹರಿದ್ರಾವತಿ ಇವರ ಸಹಕಾರದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ತಿಳಿಸಿದ್ದಾರೆ.

ಇದು ಸಂಸ್ಥೆಗೆ 14ನೇ ನೇತ್ರ ಶಿಬಿರವಾಗಿದ್ದು, ನಾಡಿನ ಪ್ರತಿಷ್ಠಿತ ನೇತ್ರಾಲಯಗಳಲ್ಲಿ ಒಂದಾದ ಉಡುಪಿಯ ಪ್ರಸಾದ್ ನೇತ್ರಾಲಯ ಶಿಬಿರವನ್ನು ನಡೆಸಿಕೊಡಲಿದೆ. ಬೆಳಗ್ಗೆ 9.30 ಶಿಬಿರ ಆರಂಭವಾಗಲಿದ್ದು, ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಹಾಜರಿರಬೇಕು. ಇಲ್ಲಿ ತಪಾಸಣೆ ನಡೆಸಿ, ಶಸ್ತ್ರ ಚಿಕಿತ್ಸೆಗೆ ಆಯ್ಕೆ ಆದವರನ್ನು ಅದೇ ದಿನ ಉಡುಪಿಗೆ ಕರೆದೊಯ್ದು, ಮಾರನೇ ದಿನ ಶಸ್ತ್ರ ಚಿಕಿತ್ಸೆ ನಡೆಸಿ ಶನಿವಾರ ವಾಪಾಸ್ ಕರೆ ತರಲಿದ್ದಾರೆ. ಆರೋಗ್ಯವಾಗಿ ಇರುವವರಿಗೆ ಯಾವುದೇ ಸಹಾಯಕರ ಅಗತ್ಯ ಇರುವುದಿಲ್ಲ. ಊಟ, ಉಪಹಾರ, ಚಿಕಿತ್ಸೆ, ಔಷಧಿ ಎಲ್ಲವೂ ಉಚಿತವಾಗಿರುತ್ತದೆ.

ಶಿಬಿರದ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳುವಂತೆ ಮಂಜುನಾಥ್ ಎಸ್. ಬ್ಯಾಣದ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 8152941498 ಗೆ ಸಂಪರ್ಕಿಸಬಹುದಾಗಿದೆ.

Leave a comment