ಕನ್ನಡ ರಾಜ್ಯೋತ್ಸವ ; ರಿಪ್ಪನ್‌ಪೇಟೆಯಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪವೃಷ್ಠಿ

By malnad tech

Updated on:

Spread the love

ರಿಪ್ಪನ್‌ಪೇಟೆ ; ಇಲ್ಲಿನ ಸಾವರ್ಕರ್ ನಗರದ ಕಲಾಕೌಸ್ತುಭ ಕನ್ನಡ ಸಂಘದ ಅವರಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪವೃಷ್ಠಿ ಹರಿಸುವ ಮೂಲಕ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯೊಂದಿಗೆ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷೆ ಪದ್ಮಾಸುರೇಶ ಮಾತನಾಡಿ, ಕನ್ನಡ ಭಾಷೆ ನಮ್ಮ ನಿತ್ಯದ ನಡೆ-ನುಡಿಯಾಗಲಿ. ಕನ್ನಡ ಪರಂಪರೆಯ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಕನ್ನಡ ಭಾಷೆ, ನೆಲ, ಜಲದ ಋಣತೀರಿಸಬೇಕು ಎಂದು ಹೇಳಿದರು.

ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಎಂ.ಸುರೇಶಸಿಂಗ್, ರವೀಂದ್ರ ಕೆರೆಹಳ್ಳಿ, ಯೋಗೇಂದ್ರಗೌಡ, ನಾಗರತ್ನ ದೇವರಾಜ್, ಶೈಲಾ ಆರ್. ಪ್ರಭು, ವೇದಾವತಿ, ರೇಖಾ ರವಿ, ಅಶ್ವಿನಿ ರವಿಶಂಕರ್, ಗೀತಾ ಅಣ್ಣಪ್ಪ, ನಾಗರಾಜ ಕೆದಲುಗುಡ್ಡೆ, ಪದ್ಮಾಕುಮಾರ್, ಸೀತಾ ರಾಜಪ್ಪ, ಲಕ್ಷ್ಮಿ ಶ್ರೀನಿವಾಸ, ರಾಘವೇಂದ್ರ, ಇನ್ನಿತರರು ಪಾಲ್ಗೊಂಡಿದರು.

Leave a comment