ಮೂಡಿಗೆರೆ ; ಚಾಲಕನ ನಿಯಂತ್ರಣ ತಪ್ಪಿ ಕ್ರೇನ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮೂಡಿಗೆರೆ ಪಟ್ಟಣದ ಹೆಸ್ಗಲ್ ರಸ್ತೆಯ ಸಂತೆ ಮೈದಾನದ ಬಳಿ ಬುಧವಾರ ನಡೆದಿದೆ.

ಅಂಗನವಾಡಿ ಕಾರ್ಯಕರ್ತೆ ಸುಪ್ರಿತಾ (26) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಹಿಂಬದಿ ಕಳಿತಿದ್ದ ವಕೀಲೆ ಸುಜಾತ ಎಂಬುವರಿಗೆ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆ ದಾಖಲಿಸಲಾಗಿದೆ. ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗೆ ಬಂದಿದ್ದ ಕ್ರೇನ್ ಎಂದು ತಿಳಿದು ಬಂದಿದೆ.

ಕ್ರೇನ್ ಬ್ರೇಕ್ ಫೇಲ್ ಅಥವಾ ಚಾಲಕನ ಅಜಾಕರಕತೆಯಿಂದ ಆದ ಘಟನೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದ್ದು, ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.