ಏಡ್ಸ್ ಬಗ್ಗೆ ಭಯ ಬೇಡ ; ನ್ಯಾಯಾಧೀಶ ಮಾರುತಿ ಶಿಂಧೆ

By malnad tech

Published on:

Spread the love

ಹೊಸನಗರ ; ಏಡ್ಸ್ ಕಾಯಿಲೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಹದಿಹರೆಯದ ವಯಸ್ಸಿನಲ್ಲಿ ಒಂದು ತಪ್ಪು ಹೆಜ್ಜೆಯಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮಾರುತಿ ಶಿಂಧೆ ಹೇಳಿದರು.

ಇಲ್ಲಿನ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪದವಿ ಪೂರ್ವ ಕಾಲೇಜು, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಸಾರ್ವಜನಿಕರ ಆಸ್ವತ್ರೆಯವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂತರಾಷ್ಟ್ರೀಯ ಅಂಗವಿಕಲರ ದಿನಾಚರಣೆಯನ್ನು ಮಿಷನ್ ಸುರಕ್ಷಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೊಸನಗರದ ವೈದ್ಯಾಧಿಕಾರಿ ಡಾ. ಶಿವಯೋಗಿ ಈ ಕಾರ್ಯಕ್ರಮದಲ್ಲಿ ಮಾತನಾಡಿ, ಏಡ್ಸ್ ಕಾಯಿಲೆಯ ವಿಸ್ತಾರ ರೂಪ ಅದರ ಅರ್ಥವನ್ನು ಎಲ್ಲಾ ವಿದ್ಯಾರ್ಥಿಗಳು ತಿಳಿದಿರಬೇಕು. ಕಾಯಿಲೆಯ ಹಿನ್ನೆಲೆ ಹಾಗೂ ಹೆಚ್‌ಐವಿ ವೈರಸ್ ದೇಹದ ಮೇಲೆ ಬೀರುವಂತ ಪರಿಣಾಮದ ಕುರಿತು ಮಾಹಿತಿ ನೀಡಿದರು.

ಹೊಸನಗರದ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಲಹೆಗಾರರಾದ ಸುಷ್ಮಾ ಎಸ್ ರಾವ್‌ ಮಾತನಾಡಿ, ಪ್ರತಿಯೊಬ್ಬರು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡರೆ ಒಳ್ಳೆಯದು ಇಲ್ಲವಾದರೇ ಏಡ್ಸ್ ಅಂಥಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. 16ರಿಂದ 21ವರ್ಷದ ಒಳಗಿನವರು ಈ ವಯಸ್ಸಿನಲ್ಲಿ ದೇಹದ ಹಿಡಿತ ಕಾಪಾಡಿಕೊಳ್ಳಬೇಕು ಯಾವುದೇ ಹುಡುಗ ಅಥವಾ ಹುಡುಗಿ ಮನಸ್ಸಿನ ನಿಗ್ರಹ ಇರದಿದ್ದಲ್ಲಿ ಹೆಚ್‌ಐವಿಯಂತ ಕಾಯಿಲೆಗೆ ಬಲಿಯಾಗಬೇಕಾಗುತ್ತದೆ ಎಲ್ಲಾ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಮಾತನ್ನು ತಿಳಿಸಿದರು.

ಹೊಸನಗರದ ವಕೀಲ ಎ.ಜೆ. ಕರ್ಣಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಏಡ್ಸ್ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮಾಡಿಸುವುದರ ಜೊತೆಗೆ ಇತ್ತಿಚೇಗೆ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದರ ಕುರಿತು ವಿದ್ಯಾರ್ಥಿಗಳು ಜಾಗೃತಿ ವಹಿಸುವಂತೆ ಹಾಗೂ ಕಾನೂನಿನಲ್ಲಿ ಪೋಕ್ಸೋ ಕಾಯ್ದೆಯಿಂದ ಕಠಿಣ ಕ್ರಮದ ಬಗ್ಗೆ ವಿವರವಾಗಿ ವಿವರಿಸಿದರು.

ಹೊಸನಗರದ ವಕೀಲ ಮೋಹನ್ ಜಿ.ಶೆಟ್ಟಿ ವಿಕಲಚೇತನದ ದಿನದ ಅಂಗವಾಗಿ ಮಾತನಾಡಿ, ವಿಕಲಚೇತನ ಒಂದು ಅಸಹಾಯಕತೆಯಲ್ಲ ದೇವರು ನೀಡಿರುವ ಒಂದು ಅದ್ಭುತವಾದ ಪುನರ್ ಶಕ್ತಿ ಎಂದು ಪರಿಗಣಿಸಬೇಕಾಗಿ ಕರೆ ನೀಡಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ನಾಯ್ಕ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಿಗೆ ಒಳ್ಳೆಯ ಅರಿವು ಮೂಡಿಸಿದ್ದಾಂತಾಗುತ್ತದೆ ನಮ್ಮ ಕಾಲೇಜಿಗೆ ಈ ಭಾಗ್ಯ ಸಿಕ್ಕಿರುವುದು ತುಂಬಾ ಪುಣ್ಯವೆಂದು ಭಾವಿಸುತ್ತಾ ವಿದ್ಯಾರ್ಥಿಗಳು ಮಾಡುವಂಥಹ ತಪ್ಪುಗಳಿಗೆ ಮುನ್ನೆಚ್ಚರಿಕೆಯಾಗಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವ ಪರಿಸ್ಥತಿಯಲ್ಲಿ ತಮ್ಮನ್ನು ತಾವು ದುಶ್ಚಟಗಳಿಗೆ ಒಳಗಾಗದಂತೆ ಉತ್ತಮ ವಿದ್ಯಾರ್ಥಿಯಾಗಿ ಕಾಲೇಜಿನಿಂದ ಹೊರ ಹೋಗುವಂತೆ ಹಾಗೂ ಒಳ್ಳೆಯ ವಿದ್ಯಾರ್ಥಿಯಾಗಿ ಹೆಸರನ್ನು ತರುವಂತೆ ಮಿಷನ್ ಸುರಕ್ಷಾ ಕಾರ್ಯಕ್ರಮದ ಕುರಿತು ಮಕ್ಕಳ ಸುರಕ್ಷತಾ ಕ್ರಮವಾದ ಲೈಂಗಿಕ ದೌರ್ಜನ್ಯ, ವಂಚನೆ ಅಪರಿಚಿತ/ಪರಿಚಿತ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದುವುದು ಸಾಮಾಜಿಕ ಮಾಧ್ಯಮಗಳಲ್ಲಿ ಸಲ್ಲದ ಚಿತ್ರ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ ದೈಹಿಕ ಸಂಪರ್ಕ ಹೊಂದುವುದು ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಹಾಯಕ್ಕಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು 112 ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀನಿವಾಸ್ ನಾಯ್ಕ್, ಡಾ, ಶಿವಯೋಗಿ, ಆರೋಗ್ಯ ಇಲಾಖೆಯ ಆಪ್ತ ಸಹಾಯಕಿ ಸುಷ್ಮಾ ಶ್ರೀನಿವಾಸ್‌ರಾವ್, ಕರ್ಣ ಕುಮಾರ್, ಮೋಹನ್ ಶೆಟ್ಟಿ, ಉಪನ್ಯಾಸಕರಾದ ಸ್ವಾಮಿರಾವ್, ಅಶೋಕ್ ಕುಮಾರ್, ರಾಜ್ಯಶಾಸ್ತ್ರ ಉಪನ್ಯಾಸಕ ಅಶೋಕ್ ಕುಮಾರ್, ಕಾಲೇಜಿನ ಎಲ್ಲಾ ಉಪನ್ಯಾಸಕರು ಸಿಬ್ಬಂದಿಗಳು ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಅಶಾ ಕಾರ್ಯಕರ್ತೆಯರು, ನರ್ಸ್ಸ್ಗಳು ಅತಿಥಿ ಉಪನ್ಯಾಸಕರು ಹಾಗೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.

Leave a comment