ಹೊಸನಗರ ; ಶ್ರೀಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಜನ್ಮ ದಿನದ ಪ್ರಯುಕ್ತ ಹೊಸನಗರದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಹೊಸನಗರ ತಾಲ್ಲೂಕು ಶ್ರೀ ರಾಮಚಂದ್ರಪುರ ಮಠ ಗೋಪಾಲಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮಠದ ಗೋವುಗಳಿಗೆ ಮೇವು ವಿತರಿಸಿ ಪೂಜ್ಯರು ಸುಖ ಸಂತೋಷ, ಆರೋಗ್ಯ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಲು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರು ಸದಸ್ಯ ಎನ್.ಆರ್ ದೇವಾನಂದ್, ಮೋಹನ್ ಶೆಟ್ಟಿ, ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ವಿಜೇಂದ್ರ ಶೇಟ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ.ಪ್ರದೀಪ್, ಸುಧೀಂದ್ರ ಪಂಡಿತ್, ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು ಗ್ರಾಮಸ್ಥರು ಯೋಜನೆಯ ಕಾರ್ಯಕರ್ತರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.







