ಹೊಸನಗರ ತಾಲೂಕಿನಲ್ಲಿ 14 BSNL ಟವರ್‌ಗಳ ನಿರ್ಮಾಣಕ್ಕೆ ಚಾಲನೆ : ಸಂಸದ ಬಿ.ವೈ. ರಾಘವೇಂದ್ರರಿಗೆ ಅಭಿನಂದನೆ 

By malnad tech

Published on:

Spread the love

ಹೊಸನಗರ ; ತಾಲೂಕಿನ ಬಹುಕಾಲದ  ಸಾರ್ವಜನಿಕರ ಬೇಡಿಕೆಯಾಗಿದ್ದ ಬಿಎಸ್ಎನ್ಎಲ್ ಮೊಬೈಲ್ ಟವರ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ಕಾರ್ಯ ವೈಖರಿಗೆ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಲೆನಾಡಿನ ಹೃದಯ ಭಾಗವಾದ ತಾಲೂಕಿನ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಂಪರ್ಕಕ್ಕೆ ಅಗತ್ಯ ಮೊಬೈಲ್ ನೆಟ್‌ವರ್ಕ್ ಸೌಲಭ್ಯ  ಕಲ್ಪಿಸುವಂತೆ ಜನತೆ ಕಳೆದ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಗ್ರಾಮಸ್ಥರ ಬೇಡಿಕೆಗೆ ಸಂಸದರು ಇದೀಗ ಸೂಕ್ತವಾಗಿ ಸ್ಪಂದಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸುಮಾರು 70 ಬಿಎಸ್ಎನ್ಎಲ್ ಮೊಬೈಲ್ ಟವರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಗ್ರಾಮ ಪಂಚಾಯತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸದಾ ಅಭಿವೃದ್ಧಿ ಕುರಿತು  ಹೆಚ್ಚಿನ ಒತ್ತು ನೀಡುತ್ತಿರುವ ಯುವ ಸಂಸದ ರಾಘವೇಂದ್ರ, ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಇದೀಗ ಕೆಟಗರಿ- 4 ರಲ್ಲಿ ಟವರ್‌ಗಳನ್ನು ಮಂಜೂರು ಮಾಡಿಸಿದ್ದಾರೆ. ತಾಲೂಕಿನ 14 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂತನ 14 ಟವರ್‌ಗಳ ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 71 ಬಿಎಸ್ಎನ್ಎಲ್ ಟವರ್ ಮಂಜೂರಾತಿ ಮಾಡಿಸಿರುವುದು ಜನತೆ ಹರ್ಷ ತಂದಿದೆ.

ಪ್ರತಿನಿತ್ಯ ಜನರ ಹಲವಾರು ಸಮಸ್ಯೆಗಳನ್ನು ಕುರಿತು ಸೂಕ್ತವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳವ ಸಂಸದರ ಕಾರ್ಯವೈಖರಿಯನ್ನು ಜಿಲ್ಲಾ ಬಿಜೆಪಿ ಯುವ ಮುಖಂಡ ಹೆಚ್. ಆರ್. ತೀರ್ಥೇಶ್ ಪ್ರಶಂಸಿಸಿ ಅಭಿನಂದಿಸಿದ್ದಾರೆ.

Leave a comment