ರಿಪ್ಪನ್‌ಪೇಟೆ ; ಇತ್ತೀಚೆಗೆ ನಡೆದ ಅಂಧರ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮಲೆನಾಡಿನ ಮಗಳು ಕಾವ್ಯಾ ವಿ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದಾಳೆ.
ತನ್ನೂರಿಗೆ ಬರುತ್ತಿದ್ದಂತೆ ವಿಶ್ವಕರ್ಮ ಸಮಾಜದವರು ಮತ್ತು ನಾಗರೀಕರು ರಿಪ್ಪನ್‌ಪೇಟೆಯಲ್ಲಿ ಚಂಡೆ, ಡೊಳ್ಳು ತಂಡಗಳ ಪೂರ್ಣ ಕುಂಭಗಳೊಂದಿಗೆ ಆರತಿ ಬೆಳಗಿ ಸ್ವಾಗತಿಸುವ ಮೂಲಕ ಭರಮಾಡಿಕೊಂಡರು.

ಗ್ರಾಮಾಡಳಿತ, ವೀರಶೈವ ಸಮಾಜ, ವಿಶ್ವ ಕರ್ಮ, ಮರಾಠ ಸಮಾಜ ಸೇರಿದಂತೆ ಪೊಲೀಸ್ ಇಲಾಖೆ, ರಿಪ್ಪನ್‌ಪೇಟೆ ವಿನಾಯಕ ಸ್ವಾಮಿ ದೇಶ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ವಿನಾಯಕ ವೃತ್ತ ಮಾರ್ಗದೊಂದಿಗೆ ತನ್ನೂರಿಗೆ ತೆರಳಿದರು.

ಈ ಸಂದರ್ಭದಲ್ಲಿ ಕಾವ್ಯಾಳ ವೆಂಕಟೇಶ್ ಆಚಾರ್, ಧನಲಕ್ಷ್ಮಿ, ಮಹಾಲಕ್ಷ್ಮಿ, ಮೀನಾಕ್ಷಿ, ಮಹೇಶ್ ಆಚಾರ್, ಜಯಂತಿ, ಶೈಲ್ ಆರ್ ಪ್ರಭು, ದೇವದಾಸ್ ಆಚಾರ್, ಶ್ರೀನಿವಾಸ ಆಚಾರ್, ಸುಧೀಂದ್ರ ಪೂಚಾರಿ, ಪಿಎಸ್ಐ ರಾಜು ರೆಡ್ಡಿ, ಸಿಬ್ಬಂದಿ ವರ್ಗ, ಕೇಶವ ಆರ್, ಕೋಮಲಾ ಕೇಶವ, ಲಿಂಗಪ್ಪ ಕಗ್ಗಲಿ, ನಾಗಭೂಷಣ, ಜಗದೀಶ ಕಾಗಿನಲ್ಲಿ ಸೇರಿದಂತೆ ಕನ್ನಡಪರ ಸಂಘಟನೆಗಳು ಹಾಗೂ ಗಾಮಸ್ಥರು ಹಾಜರಿದ್ದರು.







