ಹೊಸನಗರ ; ಅಯ್ಯಪ್ಪ ಸ್ವಾಮಿ ಭಕ್ತವೃಂದ ಕೊಪ್ಪರಗುಂಡಿಯಲ್ಲಿ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ

By malnad tech

Published on:

Spread the love

ಹೊಸನಗರ ; ಅಯ್ಯಪ್ಪ ಸ್ವಾಮಿ ಸನ್ನಿದಾನ ಕೊಪ್ಪರಗುಂಡಿಯಲ್ಲಿ ಜ. 10ರ ಶನಿವಾರ ಶ್ರೀ ಅಯ್ಯಪ್ಪ ಸ್ವಾಮಿ ಪಡೀಪೂಜೆ ಮತ್ತು ಮಹಾಮಂಗಳಾರತಿ, ಕನ್ಯಾ ಸ್ವಾಮಿಗಳ ಕನ್ಯಾ ಪೂಜೆ ಮತ್ತು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನಡೆಯಲಿದೆ ಹಾಗೂ ಜ.11 ರಂದು ಮಾಲೆ ಧರಿಸಿದ ವೃತಧಾರಿಗಳ ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಹೊರಡುವ ಕಾರ್ಯಕ್ರಮ ನಡೆಯಲಿದೆ.

ಭಕ್ತಾದಿಗಳು ಈ ಎರಡು ದಿನದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾಲೆ ಧರಿಸಿದ ವೃತಧಾರಿಗಳ ಇರುಮುಡಿಗೆ ಒಂದು ಮುಷ್ಟಿ ಅಕ್ಕಿ ಹಾಕಿ ಸ್ವಾಮಿಗಳಿಗೆ ಆಶೀರ್ವದಿಸಿ ಶ್ರೀ ಸ್ವಾಮಿಯ ಮುಡಿಗಂಧ ಪ್ರಸಾದವನ್ನು ಸ್ವೀಕರಿಸುವಂತೆ ಕೊಪ್ಪರಗುಂಡಿ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a comment