ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ನನ್ನ ಗೆಲುವು ಖಚಿತ ; ರಘುಪತಿಭಟ್

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ: ಮೂರು ಬಾರಿ ಶಾಸಕರಾಗಿ ಜನ ಸೇವೆ ಮಾಡಿರುವ ಅನುಭವವಿದೆ. ಜನಸೇವೆ ಮಾಡುವುದರಲ್ಲಿ ನಾನು ಎಂದಿಗೂ ಹಿಂದೆ-ಮುಂದೆ ನೋಡಿದವನಲ್ಲ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ (BJP) ಸಾಕಷ್ಟು ಕಾರ್ಯಕರ್ತರು ನನ್ನ ಬೆಂಬಲಕ್ಕೆ ಬಂದಿದ್ದು ನೈರುತ್ಯ ಪದವೀಧರ ಕ್ಷೇತ್ರದಿಂದ ನನ್ನ ಗೆಲುವು ಖಚಿತ ಎಂದು ಮಾಜಿ ಶಾಸಕ ಹಾಗೂ ಪರಿಷತ್ ಚುನಾವಣೆಯ ಬಿಜೆಪಿ ಬಂಡಾಯ ಅಭ್ಯರ್ಥಿ ಉಡುಪಿ ರಘುಪತಿಭಟ್‌ (Raghupathi Bhat) ಹೇಳಿದರು.

ಪಟ್ಟಣದ ಶೀತಲ್ ಹೋಟೆಲ್ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಪಕ್ಷದ ನಿಷ್ಠಾವಂತ ಶಾಸಕರಾಗಿ ಮೂರು ಬಾರಿ ಜಯಶಾಲಿಯಾಗಿದ್ದೇನೆ ಆದರೆ ಬಕೆಟ್ ಹಿಡಿಯುವ ರಾಜಕೀಯದಿಂದ ನನಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಎಂ.ಎಲ್.ಎ ಟಿಕೆಟ್ ತಪ್ಪಿಸಿದರು. ಅದಕ್ಕೂ ನಾನು ಬಿಜೆಪಿ ಪಕ್ಷದ ಬಗ್ಗೆ ಬೇಸರಿಸಿಕೊಳ್ಳದೆ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಿ ಬಿಜೆಪಿ ಶಾಸಕರನ್ನು ಗೆಲ್ಲಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿ ಗೆಲ್ಲಿಸಿದ್ದೇವೆ. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಂಸದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಲುವಾಗಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದೇವೆ ಇಷ್ಟೆಲ್ಲ ಕೆಲಸ ಮಾಡಿದರೂ ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಲು ಕೆಲವು ಬಿಜೆಪಿ ಪಕ್ಷದ ಬಲಾಡ್ಯರು ಟಿಕೆಟ್ ತಪ್ಪಿಸಿದರು. ನನಗೆ ಕೆಲಸ ಮಾಡುವ ಹುಮ್ಮಸಿದೆ ಸಾಕಷ್ಟು ಸಮಯವೂ ಇದೆ ಈ ಹಿಂದಿನ 25 ವರ್ಷಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿರುವ ಅನುಭವವೂ ಇದೆ. ಮೇ 21ರಂದು ಶಿವಮೊಗ್ಗದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ನಾನು ಒಬ್ಬ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ನಾನು ಒಬ್ಬ ಅಭ್ಯರ್ಥಿ ಎಂದು ಘೋಷಿಸಿದರೂ ನನಗೆ ಟಿಕೆಟ್ ವಂಚಿಸಿ ಬೇರೆಯೊಬ್ಬರಿಗೆ ನೀಡಿದ್ದಾರೆ. ಈ ಬಿಜೆಪಿ ಟಿಕೆಟ್ ಕೈ ತಪ್ಪಲು ಬೇರೆ ಯಾರು ಬರಲಿಲ್ಲ ನಮ್ಮ ಪಕ್ಷದಲ್ಲಿಯೇ ಬಕೆಟ್ ಹಿಡಿಯುವವರು ಈ ಕೆಲಸ ಮಾಡಿದ್ದಾರೆ ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಚಿಹ್ನೆ ಇಲ್ಲದಿರುವುದರಿಂದ ನನ್ನ ಗೆಲುವು ಖಚಿತ ಎಂದರು.

ನಾನು ನನ್ನ ಕೇತ್ರದಲ್ಲಿ ಶಾಸಕನಾಗಿದ್ದಾಗ ಪೂರ್ಣವಾಧಿ ಕೆಲಸ ಮಾಡಿದ್ದು ನನ್ನ ಕೇತ್ರದಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡಿದ್ದೇವೆ ಇದರಿಂದ ನನ್ನ ಬೆಂಬಲಕ್ಕೆ ಜನಸಾಗರವೇ ಹರಿದು ಬರುತ್ತಿದೆ ಹಲವು ಟ್ರಸ್ಟ್‌ಗಳ ಮೂಲಕ ಸೇವೆ ಮಾಡಿರುವ ನನಗೆ ಸಾಕಷ್ಟು ಹೆಸರು ಗಳಿಸಿದ್ದು ನಾನು ಗೆದ್ದರೆ ನೈರುತ್ಯ ಪದವೀಧರ ಸಮಸ್ಯೆಗಳಿಗೆ ಸ್ಪಂದಿಸುವೆ. ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ನನ್ನ ಮೊದಲ ಆದ್ಯತೆ. ಪದವೀಧರರಿಗೆ ಕೌಶಲ್ಯ ತರಬೇತಿ ನೀಡುವುದು ಉದ್ಯಮ ವಲಯಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವು ಅಭಿವೃದ್ಧಿಗಳನ್ನು ಸರ್ಕಾರದ ಮಟ್ಟದಲ್ಲಿ ತರಲು ನಾನು ಖಂಡಿತ ಪರಿಷತ್‌ನಲ್ಲಿ ಧ್ವನಿಯಾಗಿರುತ್ತೇನೆ ಎಂದರು.

ದೇಶಭಕ್ತ ಪಕ್ಷ ನನ್ನ ಬೆಂಬಲ:
ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರ ಬೆಂಬಲ ಅವರ ಜೊತೆಗೆ ದೇಶಭಕ್ತ ಪಕ್ಷದ ಎಲ್ಲ ಕಾರ್ಯಕರ್ತರ ಬೆಂಬಲ ನನಗೆ ಸಿಕ್ಕದ್ದೂ ಇದರ ಜೊತೆಗೆ ತೀರ್ಥಹಳ್ಳಿ ಪ್ರಭಾವಿ ನಾಯಕರಾದ ಮದನ್ ಬೆಂಬಲ ನನಗೆ ಸಿಕ್ಕಿದೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ನನಗೆ ಸಂಪೂರ್ಣ ಮತದಾರರ ಬೆಂಬಲವಿದ್ದೂ ನಮ್ಮ ಜಯ ಗ್ಯಾರಂಟಿ ಎಂದರು.

ಈ ಪತ್ರಿಕಾಘೋಷ್ಠಿಯಲ್ಲಿ ಶಿವಮೊಗ್ಗ ನಗರಸಭಾ ಮಾಜಿ ಅಧ್ಯಕ್ಷರಾದ ಎಂ ಶಂಕರ್, ರಾಜರಾಮ್ ಭಟ್, ಆ.ಮ.ಪ್ರಕಾಶ್, ಸೌಜನ್ಯ ರಮೇಶ್, ವಾಟಗೋಡು ಸುರೇಶ್. ಲಿಂಗರಾಜ್, ಎಲ್ ಹೆಚ್. ಶಂಕರ್, ಮದನ್, ಲಕ್ಷ್ಮಿಕಾಂತ್ ಭಟ್, ಭದ್ರಿನಾಥ್ ಭಟ್, ನಿವಣೆ ಲೀಲಾವತಿ, ವಿದ್ಯಾಧರ್ ಭಟ್, ಶೇಖರ್ ನಾಯ್ಕ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!