ರಿಪ್ಪನ್‌ಪೇಟೆ: ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಗೆ ಶೇ. 79.40 ರಷ್ಟು ಫಲಿತಾಂಶ ಬಂದಿದೆ ಎಂದು ಉಪಪ್ರಾಚಾರ್ಯ ಕೆಸವಿನಮನೆ ರತ್ನಾಕರ್ ತಿಳಿಸಿದರು.
165 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 131 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 4, ಪ್ರಥಮ ಸ್ಥಾನದಲ್ಲಿ 17, ದ್ವಿತೀಯ ಸ್ಥಾನದಲ್ಲಿ 42, ತೃತೀಯ ಸ್ಥಾನದಲ್ಲಿ 68, ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಂದರು.
ಶಾರದಾ-ರಾಮಕೃಷ್ಣ ವಿದ್ಯಾಲಯ ಶೇ. 100 ಫಲಿತಾಂಶ
ರಿಪ್ಪನ್‌ಪೇಟೆ: ಇಲ್ಲಿನ ಶಾರದಾ-ರಾಮಕೃಷ್ಣ ವಿದ್ಯಾಲಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಗಳಿಸಿದೆ ಎಂದು ಶಾಲೆಯ ಪ್ರಾಚಾರ್ಯ ರವಿ ತಿಳಿಸಿದರು.
35 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 35 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 13, ಪ್ರಥಮ ಸ್ಥಾನದಲ್ಲಿ 18 ದ್ವಿತೀಯ ಸ್ಥಾನದಲ್ಲಿ 4 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ.
ದಿಶಾ (603) ಗಾನವಿ (580) ಅನ್ವಿತ ಎಸ್ ಸಿಂಗ್ (577) ಶಾಲಿನಿ ಕೆ.ಎನ್.(576) ರಿದ್ದಿ ರಾಮಗೌಡ (564) ವೈ.ದರ್ಪಣ ಹಾನಂಬಿ (561) ಅಂಕ ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕಳೆದ 8 ವರ್ಷದಿಂದ ಈ ಶಾರದಾ-ರಾಮಕೃಷ್ಣ ವಿದ್ಯಾಲಯ ಶೇ. 100 ಫಲಿತಾಂಶ ಗಳಿಸುತ್ತಾ ಬಂದಿರುತ್ತದೆಂದು ವಿವರಿಸಿದರು.
ಶ್ರೀಬಸವೇಶ್ವರ ಆಂಗ್ಲಮಾಧ್ಯಮ ಶಾಲೆ ಶೇ. 93 ಫಲಿತಾಂಶ
ರಿಪ್ಪನ್‌ಪೇಟೆ: ಇಲ್ಲಿನ ಶ್ರೀಬಸವೇಶ್ವರ ಅಂಗ್ಲಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ. 93 ರಷ್ಟು ಫಲಿತಾಂಶಗಳಿಸಿದೆ ಎಂದು ಮುಖ್ಯೋಪಾಧ್ಯಾಯ ಚಂದ್ರಪ್ಪ ತಿಳಿಸಿದರು.
28 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 26 ವಿದ್ಯಾರ್ಥಿಗಳು ಉತ್ತಿರ್ಣಾರಾಗಿದ್ದಾರೆ. ಅತ್ಯುನ್ನತ 11, ಪ್ರಥಮ ಸ್ಥಾನದಲ್ಲಿ 6, ದ್ವಿತೀಯ ಸ್ಥಾನ 4 ಮತ್ತು ತೃತೀಯ ಸ್ಥಾನದಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದರು.
ಬೆಳ್ಳೂರು ಸರ್ಕಾರಿ ಪ್ರೌಢಶಾಲೆ 96 ರಷ್ಟು ಫಲಿತಾಂಶ
ರಿಪ್ಪನ್‌ಪೇಟೆ: ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 96 ರಷ್ಟು ಫಲಿತಾಂಶ ಬಂದಿದೆ ಎಂದು ಮುಖ್ಯೋಪಾಧ್ಯಾಯ ಸೋಮಶೇಖರ ಬಂಡಿ ತಿಳಿಸಿದರು.
ಪರೀಕ್ಷೆಗೆ ಕುಳಿತವರು 27 ಉತ್ತೀರ್ಣಾರಾದವರು 26 ವಿದ್ಯಾರ್ಥಿಗಳು ಅದರಲ್ಲಿ ಅತ್ಯುನ್ನತ ಶ್ರೇಣಿ 5, ಪ್ರಥಮ ಸ್ಥಾನ 17, ದ್ವಿತೀಯ ಸ್ಥಾನ 4. ಒಟ್ಟು 26 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಂದರು.