ಶಿವಮೊಗ್ಗ ಲೋಕಸಭಾ ಚುನಾವಣೆ | ಬೆಳಗ್ಗೆಯಿಂದಲೇ ಹುಮ್ಮಸ್ಸಿನಿಂದ ಮತಗಟ್ಟೆಯೆಡೆಗೆ ಧಾವಿಸಿ ಚಲಾಯಿಸಿದ ಮತದಾರರು

Written by Malnadtimes.in

Published on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ : ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆದಿದೆ. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದಲೇ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ.

ಬೆಳಗ್ಗೆ ಮತದಾರರು ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ಉತ್ಸುಕರಾಗಿ ನಿಂತು ತಮ್ಮ ಮತ ಚಲಾಯಿಸಿದ ದೃಶ್ಯ ಸಾಮಾನ್ಯವಾಗಿತ್ತು.

ರಣ ಬಿಸಿಲ ಕಾರಣ ಮತದಾರರು ತಂಪಾದ ಸಮಯದಲ್ಲಿ ಮತಹಾಕಿ ಮನೆ ಸೇರಿಕೊಂಡರಾಯಿತು ಎಂದು ಮುಂಜಾನೆಯೇ ವಯೋವೃದ್ದರು, ಮಹಿಳೆಯರು, ಯುವ ಮತದಾರರು ಸರತಿ ಸಾಲಿನಲ್ಲಿ ಮತಗಟ್ಟೆಯಲ್ಲಿ ನಿಂತು ಮತದಾನ ಮಾಡಿ ಮತಹಾಕಿದ ಬಗ್ಗೆ ತಮ್ಮ ಬೆರಳನ್ನು ಎತ್ತಿ ಹಿಡಿದುಕೊಂಡು ಹೊರಬರುತ್ತಿದ್ದುದ್ದು ವಿಶೇಷವಾಗಿತ್ತು.

ಇಲ್ಲಿನ ಬರುವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೂರು ಮತಗಟ್ಟೆಗಳಿದ್ದು ಈ ಎಲ್ಲ ಮತದಾನ ಕೇಂದ್ರದಲ್ಲಿ ಮತದಾನ ಮಾಡಲು ಬಂದು ಹೋಗುವವರನ್ನು ರಾಷ್ಟ್ರೀಯ ಪಕ್ಷದ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರುಗಳು ಹಸ್ತಲಾಘವ ಮಾಡಿ ಶುಭಕೋರುತ್ತಿದ್ದರು.

ಇನ್ನೂ ಪಕ್ಷೇತರ ಅಭ್ಯರ್ಥಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಕಡೆಯವರು ನಾವುಗಳು ಏನು ಕಡಿಮೆ ಎಂಬಂತೆ ಮತದಾನಕ್ಕೆ ಬರುವವರನ್ನು ಸ್ವಾಗತಿಸಿ ತಮ್ಮ ಪರ ಮತ ಮಾಡಲು ಪ್ರೇರೇಪಿಸುತ್ತಿರುವುದು ಕಂಡು ಬಂದಿತು.

ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರು ಕೋಣಂದೂರು ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.
ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಯವರು ನೊಣಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಯವರು ನೊಣಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ನಿಟ್ಟೂರು ನಾರಾಯಣಗುರು ಸಂಸ್ಥಾನಮಠದ ಪೀಠಾಧ್ಯಕ್ಷರಾದ ರೇಣುಕಾನಂದ ಸ್ವಾಮಿಜಿಯವರು ಹುಂಚದಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.
ನಿಟ್ಟೂರು ನಾರಾಯಣಗುರು ಸಂಸ್ಥಾನಮಠದ ಪೀಠಾಧ್ಯಕ್ಷರಾದ ರೇಣುಕಾನಂದ ಸ್ವಾಮಿಜಿಯವರು ಹುಂಚದಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.
ರಿಪ್ಪನ್‌ಪೇಟೆಯ ವಿವಿಧ ಮತಗಟ್ಟೆಗೆ ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಬಿ.ಸ್ವಾಮಿರಾವ್ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮತದಾನದ ಕುರಿತು ಚರ್ಚೆ ನಡೆಸಿದ ದೃಶ್ಯ.
ರಿಪ್ಪನ್‌ಪೇಟೆಯ ವಿವಿಧ ಮತಗಟ್ಟೆಗೆ ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಬಿ.ಸ್ವಾಮಿರಾವ್ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮತದಾನದ ಕುರಿತು ಚರ್ಚೆ ನಡೆಸಿದ ದೃಶ್ಯ.
ಹೊಂಬುಜ ಜೈನಮಠದ ಡಾ.ಜಗದ್ಗುರು ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ ಹುಂಚ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.
ಹೊಂಬುಜ ಜೈನಮಠದ ಡಾ.ಜಗದ್ಗುರು ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ ಹುಂಚ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.
ರಿಪ್ಪನ್‌ಪೇಟೆ ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆ 217 ರಲ್ಲಿ ಆರಂಭದಲ್ಲಿಯೇ ಸರತಿ ಸಾಲಿನಲ್ಲಿ ಮತದಾನಕ್ಕೆ ಕಾದು ನಿಂತಿರುವುದು.
ರಿಪ್ಪನ್‌ಪೇಟೆ ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆ 217 ರಲ್ಲಿ ಆರಂಭದಲ್ಲಿಯೇ ಸರತಿ ಸಾಲಿನಲ್ಲಿ ಮತದಾನಕ್ಕೆ ಕಾದು ನಿಂತಿರುವುದು.
ಮತ ಚಲಾಯಿಸಿದ ಹೊಸನಗರ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಶ್ರೀಗಳು
ಮತ ಚಲಾಯಿಸಿದ ಹೊಸನಗರ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಶ್ರೀಗಳು

Leave a Comment

error: Content is protected !!