ಹೊಸನಗರ ; ಇಲ್ಲಿನ ವೀರಶೈವ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧಿಕಾರವು ಕೋರಂ ಕೊರತೆಯಿಂದ ಡಿ.12 ರಂದು ಅಂತ್ಯಗೊಂಡಿರುತ್ತದೆ, ಆದರೆ ಇಲ್ಲಿಯವರೆಗೂ ವಿಶೇಷಾಧಿಕಾರಿಯನ್ನು ನೇಮಿಸಿಲ್ಲ. ತಕ್ಷಣ ವಿಶೇಷಾಧಿಕಾರಿಗಳನ್ನು ನೇಮಿಸುವಂತೆ ಶಿವಮೊಗ್ಗದ ಉಪ ನಿಬಂಧಕರ ಕಛೇರಿಯ ಮುಂದೆ ನಾಳೆ (ಜು. 13 ಮಂಗಳವಾರ) ಸಂಘದ ಷೇರುದಾರರಿಂದ ಧರಣಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹೆಚ್.ಪಿ ನಂಜುಂಡಪ್ಪ ಹೇಳಿದ್ದಾರೆ.
ಅವರು ಪ್ರತಿಕಾಘೋಷ್ಠಿ ನಡೆಸಿ ಮಾತನಾಡಿ, ನಾವು ತಕ್ಷಣ ವಿಶೇಷಾಧಿಕಾರಿಗಳನ್ನು ನೇಮಿಸುವಂತೆ ಶಿವಮೊಗ್ಗ ಸಹಕಾರ ಇಲಾಖೆ ಉಪನಿಬಂಧಕರಿಗೆ ಡಿ. 02 ರಂದು ಮಾಹಿತಿ ನೀಡಿದ್ದು, ಉಪನಿಬಂಧಕರು ಕರ್ನಾಟಕ ಸಹಕಾರ ಕಾಯ್ದೆ 1959 ಕಲಂ 31(1) ರ ಪ್ರಕಾರ ನಮ್ಮ ಸಂಘಕ್ಕೆ ಆಡಳಿತ ಮಂಡಳಿಯ ಜಾಗಕ್ಕೆ ವಿಶೇಷಾಧಿಕಾರಿಗಳನ್ನು ನೇಮಿಸಿ ಆದೇಶ ಮಾಡಿ ಆಡಳಿತ ಮಂಡಳಿಯ ಆಯ್ಕೆಗೆ ಚುನಾವಣಾ ಪ್ರಕ್ರಿಯೆಗಳನ್ನು ಮಾಡಬೇಕಾಗಿರುತ್ತದೆ. ಆದರೆ ಇಲಾಖಾ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾನೂನು ಪ್ರಕಾರ ಇದುವರೆಗೂ ನಮ್ಮ ಸಂಸ್ಥೆಗೆ ವಿಶೇಷಾಧಿಕಾರಿಗಳನ್ನು ನೇಮಕ ಮಾಡದೆ ಸಂಸ್ಥೆಯ ವ್ಯವಸ್ಥೆ ಹಾಳಾಗಿದ್ದು ಇದರಿಂದ ಸಂಘದ ವ್ಯವಹಾರ ಅಭಿವೃದ್ಧಿ ಕುಂಠಿತವಾಗಿದ್ದು ಸಂಘದ ಸದಸ್ಯರಿಗೆ ಸಾಲ, ಠೇವಣಿ ಹಣವನ್ನು ಪಡೆಯಲು ತೊಂದರೆಯಾಗಿದೆ. ಆದ್ದರಿಂದ ನಮ್ಮ ಸಂಘಕ್ಕೆ ತಕ್ಷಣ ವಿಶೇಷಾಧಿಕಾರಿಗಳನ್ನು ನೇಮಕ ಮಾಡಿ ವ್ಯವಹಾರ ಸುಗಮವಾಗಿ ನಡೆಯಲು ಕಾನೂನು ಪ್ರಕಾರ ನೇಮಕ ಮಾಡಬೇಕೆಂದು ಈ ಮೂಲಕ ಆಗ್ರಹಿಸಿದ್ದು ಉಪನಿಬಂಧಕರು ವಿಶೇಷಾಧಿಕಾರಿಗಳನ್ನು ನೇಮಕ ಮಾಡಲು ಆದೇಶ ಮಾಡುವಂತೆ ಒತ್ತಾಯಿಸಿ ಜ. 13 ರಂದು ಬೆಳಗ್ಗೆ 10-00 ಗಂಟೆಗೆ ಸುಮಾರು 500 ಕ್ಕಿಂತಲ್ಲೂ ಹೆಚ್ಚು ಷೇರುದಾರರು ಶಿವಮೊಗ್ಗದಲ್ಲಿರುವ ಉಪನಿಬಂಧಕರ ಕಛೇರಿ ಮುಂದೆ ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.







