ಹೊಸನಗರ ಪ.ಪಂ. ವ್ಯಾಪ್ತಿಯಲ್ಲಿ ನೆರೆಹೊರೆ ಸಮಿತಿ ರಚನೆಗೆ ಚಾಲನೆ

By malnad tech

Published on:

Spread the love

ಹೊಸನಗರ ; ಪಟ್ಟಣ ಪಂಚಾಯತಿಯ 11 ವಾರ್ಡ್‌ಗಳ ನೆರೆಹೊರೆ ಸಮಿತಿಗೆ ಚಾಲನೆ ನೀಡಲಾಗಿದ್ದು ಈಗ ಪಟ್ಟಣ ಪಂಚಾಯತಿಯ ಸದಸ್ಯರ ಆಡಳಿತಾವಧಿ ಮುಗಿದಿರುವುದರಿಂದ ವಾರ್ಡ್‌ಗಳ ಸಮಿತಿಯನ್ನು ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ರಚಿಸಲಾಗಿದ್ದು ಸಮಸ್ಯೆಯನ್ನು ವಾರ್ಡ್ ಮುಖ್ಯಸ್ಥರಿಗೆ ಲಿಖಿತವಾಗಿ ನೀಡಿದ್ದಲ್ಲಿ ಅದನ್ನು ಅವರು ನಮ್ಮ ಗಮನಕ್ಕೆ ತಂದು ನಮ್ಮ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬಗೆಹರಿಸಲು ಸಾಧ್ಯವಾದರೆ ಬಗೆಹರಿಸುವುದಾಗಿ ಇಲ್ಲವಾದಲ್ಲಿ ಮುಂದಿನ ಅಧಿಕಾರಿಗಳಿಗೆ ಪತ್ರ ವರ್ಗಾವಣೆ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಎನ್.ಹರೀಶ್‌ ವಾರ್ಡ್ ಸದಸ್ಯರಿಗೆ ತಿಳಿಸಿದರು.

ಹೊಸನಗರದ 2ನೇ ವಾರ್ಡ್ ಸಮಿತಿಯನ್ನು ರಾಜು ಶೆಟ್ಟಿಯವರ ಮನೆಯಂಗಳದಲ್ಲಿ ರಚಿಸಲಾಗಿದ್ದು ಈ ಸಂದರ್ಭದಲ್ಲಿ ನಿವಾಸಿಗಳಿಗೆ ತಿಳಿಸಿದ ಅವರು, ನಾವೆಲ್ಲರೂ ವಿಧಾನಸಭೆಗೆ ಹೋಗಲು ಸಾಧ್ಯವಿಲ್ಲದ ಕಾರಣ ಶಾಸಕರನ್ನು ಆಯ್ಕೆ ಮಾಡಿ ನಮ್ಮ ಸಮಸ್ಯೆಯನ್ನು ಅವರ ಮೂಲಕ ವಿಧಾನಸಭೆಯ ಗಮನಕ್ಕೆ ತರುತ್ತೇವೋ ಅದೇ ರೀತಿ ತಾವು ನಾವು ಒಂದೊಂದು ವಾರ್ಡ್‌ಗಳಿಗೆ 12 ಜನರ ಸಮಿತಿಯನ್ನು ರಚಿಸಿದ್ದೇವೆ ಅವರು ನೀವು ನಿಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತರುವುದಾಗಲಿ ಅಥವಾ ಪತ್ರದ ಮೂಲಕ ತಿಳಿಸಿದರೆ ಅವರು ಪಟ್ಟಣ ಪಂಚಾಯಿತಿ ಆಡಳಿತ ವರ್ಗದವರ ಗಮನಕ್ಕೆ ತರುತ್ತಾರೆ. ನಿಮ್ಮ ಸಮಸ್ಯೆ ಹೊತ್ತುಕೊಂಡು ನಿಮ್ಮ ಕೆಲಸ ಹಾಳು ಮಾಡಿಕೊಂಡು ಪಟ್ಟಣ ಪಂಚಾಯಿತಿಗೆ ಅಲೆಯುವ ಕೆಲಸ ತಪ್ಪಿಸುವ ಉದ್ದೇಶದಿಂದಲೇ ಸರ್ಕಾರ ಸಮಿತಿಯನ್ನು ರಚಿಸಲು ಪ್ರಕಟಣೆಯ ಮೂಲಕ ನಮಗೆ ವಹಿಸಿದ್ದಾರೆ. ಆಯ್ಕೆ ಮಾಡಿರುವ ಸದಸ್ಯರು 30 ತಿಂಗಳು ನಿಮ್ಮ ಸೇವೆ ಮಾಡವ ಹಕ್ಕು ಹೊಂದಿರುತ್ತಾರೆ.

ಪಟ್ಟಣ ಪಂಚಾಯತಿಯ ಚುನಾವಣೆ ನಡೆದು ಆಯ್ಕೆಯಾದ ಸದಸ್ಯರುಗಳು ನಿಮ್ಮ ಸೇವೆಯನ್ನು ಪರಿಗಣಿಸಬೇಕು ಹಾಗೂ ಯಾವುದೇ ದೂರುಗಳು ಸಮಸ್ಯೆಗಳಿದ್ದರೂ ಆಯ್ಕೆಯಾದ ಪಟ್ಟಣ ಪಂಚಾಯತಿ ಸದಸ್ಯರ ಗಮನಕ್ಕೂ ತರಬಹುದು ಎಂದರು.

ಈ ನೆರೆಹೊರೆ ಸಮಿತಿಯ ರಚಿಸುವ ಸಂದರ್ಭದಲ್ಲಿ ಪ್ರಥಮ ದರ್ಜೆ ಗುಮಾಸ್ಥೆ ನೇತ್ರಾ, ಕಂದಾಯ ಅಧಿಕಾರಿ ಮಂಜುನಾಥ್, ಇಂಜಿನಿಯರ್ ಬಸವರಾಜ್, ಆರೋಗ್ಯಾಧಿಕಾರಿ ಶೃತಿ, ಕು. ಅಮೃತ ಹಾಗೂ 2ನೇ ವಾರ್ಡ್‌ನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment