ಹೊಸನಗರ ; ಭಾನುವಾರ ನಿಧನರಾದ ಮಾಜಿ ಸಚಿವ, ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ (94) ಅವರ ಆತ್ಮಕ್ಕೆ ಶಾಂತಿ ಕೋರಿ ತಾಲ್ಲೂಕಿನ ಬಟ್ಟೆಮಲ್ಲಪ್ಪದಲ್ಲಿ, ವೀರಶೈವ ಸಮಾಜ ಬಾಂಧವರಿಂದ ಸಂತಾಪ ಸೂಚಿಸಲಾಯಿತು.
ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿ, ಪಕ್ಷದ ಖಾಯಂ ಖಜಾಂಚಿಯಾಗಿ, ಪಕ್ಷ ಸಂಘಟನೆಗೆ ತಮ್ಮದೇ ಆದ ಸೇವೆ ನೀಡಿದ ರಾಜ್ಯದ ಹಿರಿಯ ರಾಜಕೀಯ ಮುತ್ಸದಿ ಶಾಮನೂರು ಶಿವಶಂಕರಪ್ಪ ಅವರ ನಿಧನವು ರಾಜ್ಯ ರಾಜಕಾರಣಕ್ಕೆ ಭಾರೀ ನಷ್ಟ ಉಂಟು ಮಾಡಿದೆ. ಅಖಿತ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಮೃತರ ಸಾವಿನಿಂದ ಲಿಂಗಾಯತ-ವೀರಶೈವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಯುವ ಮುಖಂಡ ರಾಜ್ಯ ಎಂಸಿಎ ನಿರ್ದೇಶಕ ಹೆಚ್.ಆರ್. ತೀರ್ಥೇಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹರತಾಳು ಸಹಕಾರಿ ಪ್ರಾಥಮಿಕ ಬ್ಯಾಂಕ್ ಅಧ್ಯಕ್ಷ ನಾಗರಾಜ ಹರತಾಳು, ಮಾಜಿ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಾಟಗೋಡು ಸುರೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕೈಗಾರಿಕಾ ವಿಭಾಗದ ಸದಸ್ಯ, ರಾಜ್ಯ ಎಂಸಿಎ ಮಾಜಿ ನಿರ್ದೇಶಕ ಹೆಚ್.ಆರ್ ತೀರ್ಥೇಶ್, ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ಸದಸ್ಯ ಬಸವರಾಜ್ ಕೋಳೂರು, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸದಸ್ಯ ಸಂತೋಷ್ ಮಳವಳ್ಳಿ, ಪ್ರಮುಖರಾದ ಷಣ್ಮುಖ ತೆಂಗಿನಕಟ್ಟೆ, ವಿಜೇತಗೌಡರು, ದಯಾಕರ, ಉಮೇಶ್, ಗುರುರಾಜ್, ರವಿ, ಪ್ರಶಾಂತ್, ಸೇರಿದಂತೆ ಹಲವರು ಉಪಸ್ಥಿತರಿದ್ದರು







