ರಿಪ್ಪನ್ಪೇಟೆ ; ಇಂದಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅರಸಾಳು ವಲಯ ಅರಣ್ಯಾಧಿಕಾರಿ ಶರಣಯ್ಯ ಕೆ.ವಿ. ಕರೆ ನೀಡಿದರು.

ರಿಪ್ಪನ್ಪೇಟೆಯಲ್ಲಿ ಶಿವಮೊಗ್ಗ ಎಸ್.ಜೆ.ಜಿ. ವಿದ್ಯಾಪೀಠ ಮತ್ತು ಶ್ರೀಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಬಸವೇಶ್ವರ ರೋಟರಿ ಇನ್ಟ್ರ್ಯಾಕ್ಟ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕ್ರೀಡೆ ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸಲು ಆತ್ಯಗತ್ಯ ಕ್ರೀಡಾಪಟುಗಳು ಹೆಚ್ಚು ಆರೋಗ್ಯಪೂರ್ಣವಾಗಿರಲು ಸಹಕಾರಿಯಾಗಿದೆ.

ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬ ಇನ್ನಿತರ ಶುಭ ಕಾರ್ಯಕ್ರಮದಲ್ಲಿ ಹಣ್ಣಿನ ಗಿಡಗಳನ್ನು ನೀಡಿ ಮತ್ತು ನೆಟ್ಟು ಪಾಲನೆ ಪೋಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಪರಿಶುದ್ಧ ಗಾಳಿ ದೊರೆಯುವುದೆಂದು ಹೇಳಿ, ಹಣ್ಣುಗಳನ್ನು ತಿನ್ನಲು ಸಹಕಾರಿಯಾಗುವುದೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಆಂಗ್ಲಮಾಧ್ಯಮ ಶಾಲೆಯ ಸಿಡಿಸಿ ಉಪಾಧ್ಯಕ್ಷೆ ಯಶೋಧ ಲಕ್ಷ್ಮಣ ವಹಿಸಿದರು.
ಎಸ್.ಜೆ.ಜಿ. ವಿದ್ಯಾಪೀಠದ ನಿರ್ದೇಶಕ ಎಲ್.ವೈ. ದಾನೇಶಪ್ಪ, ಡಿ.ಆರ್.ಎಫ್. ಸುನೀಲ್, ಶ್ರೀಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಡಾಕಪ್ಪ ಹಾಗೂ ಈಶ್ವರ ಮಳಕೊಪ್ಪ, ಕುಶಲ ಚಂದ್ರಶೇಖರ್, ಮುಖ್ಯಶಿಕ್ಷಕ ಗುರುಪ್ರಕಾಶ್, ವಿಜೇಂದ್ರ ಮುಖ್ಯೋಪಾಧ್ಯಾಯ ಕೆ.ಎನ್.ಚಂದ್ರಪ್ಪ, ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು.







