ಸದೃಢ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವ ; ಮತ್ತೂರು ಮಧುಕರ್

By malnad tech

Published on:

Spread the love

ರಿಪ್ಪನ್‌ಪೇಟೆ ; ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ಯುವ ಸಮಾವೇಶವನ್ನು ಪಟ್ಟಣದ ವಿಶ್ವಮಾನವ ಸಭಾ ಭವನದಲ್ಲಿ ನಡೆಯಿತು.

ಹೊಸನಗರ ತಾಲೂಕಿನ 18-28 ವಯಸ್ಸಿನ ಯುವಕರು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಆರೆಸೆಸ್ಸ್ ನ ತಾಲೂಕು ಸಂಘಚಾಲಕ ಶ್ಯಾಮ್ ಸುಂದರ್ ಅವರು ನೆರವೇರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಆರೆಸೆಸ್ಸ್ ಪರಿಚಯ ಮಾಡಲಾಯಿತು. ಗಣೇಶ ಮಧುಕರ್ ಅವರು ಸಾಂಸ್ಕೃತಿಕ ಭಾರತದ ಭೂಪಟ ಪರಿಚಯ ಮಾಡಿಕೊಟ್ಟರು. ಮೂರನೇ ಅವಧಿಯಲ್ಲಿ ಕೃಷಿ, ವಿಜ್ಞಾನ, ರಾಮಾಯಣ, ಮಹಾಭಾರತ, ಪರಿಸರ ಹೀಗೆ ಎಲ್ಲಾ ಕ್ಷೇತ್ರದ ವಿಷಯಗಳ ಮೇಲೆ ರಸಪ್ರಶ್ನೆ ಕಾರ್ಯಕ್ರಮವನ್ನು ನಂದನ್ ನಡೆಸಿಕೊಟ್ಟರು.

ಸಮಾರೋಪ ಕಾರ್ಯಕ್ರಮದ ಮುಖ್ಯ ವಕ್ತಾರ ಮತ್ತೂರಿನ ಮಧುಕರ್ ಮಾತನಾಡಿ, ಹಿಂದೂ ಸಮಾಜವನ್ನು ಸಂಘಟನೆ ಮಾಡುವ ಕಾಯಕದಲ್ಲಿ ಆರೆಸೆಸ್ಸ್ ಗೆ ನೂರು ವರ್ಷ, ಸ್ವಾತಂತ್ರ್ಯ ಹೋರಾಟದ ಚಳುವಳಿಯಾಗಿ ಪ್ರಾರಂಭವಾದ ಸಂಘವನ್ನು ದೇಶದ ಮೂಲೆ ಮೂಲೆಗೂ ಮುಟ್ಟಿಸಿದ್ದು ಯುವಕರೇ. ಹಿರಿಯರ ತ್ಯಾಗ, ಬಲಿದಾನ, ಸಮರ್ಪಣೆ ನಮಗೆ ಪ್ರೇರಣೆಯಾಗಲಿ. ಯುವಕರೇ ಈ ದೇಶದ ಭವಿಷ್ಯ, ಯುವ ಪೀಳಿಗೆ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ಉದ್ಯೋಗದಾತರಾಗಬೇಕು. ಹೊಸ ಹೊಸ ಸ್ಟಾರ್ಟಪ್ ಗಳನ್ನು ಕಟ್ಟಿ ಬೆಳಸಬೇಕು. ಯುವ ಪೀಳಿಗೆ ಕೃಷಿಯ ಕಡೆಗೆ ಆಸಕ್ತಿ ಹೆಚ್ಚುತ್ತಿರುವುದು ಸಂತೋಷದ ಸಂಗತಿ ಎಂದರು.

ಪ್ರಶ್ನೋತ್ತರ ಅವಧಿಯಲ್ಲಿ ಯುವಕರಿಂದ ಆರೆಸೆಸ್ಸ್ ವಿಷಯದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರು.ಮಧುಕರ್ ಪ್ರತಿಯೊಂದು ಪ್ರಶ್ನೆಗಳನ್ನು ಪರಿಹರಿಸಿದರು. ಕಾರ್ಯಕ್ರಮದಲ್ಲಿ ಕಾರ್ತಿಕ್ ಸ್ವಾಗತಿಸಿದರು. ನಂದನ್ ವಂದಿಸಿದರು‌.

Leave a comment