ಹೊಸನಗರ ; ಸತತ 35 ವರ್ಷ ಜನರ ಮಧ್ಯೆ ಸುದೀರ್ಘ ಸೇವೆಯ ಫಲವೇ ಹೊಸನಗರ ತಾಲ್ಲೂಕು ಸಹಕಾರಿ ರತ್ನ ಪ್ರಶಸ್ತಿ ಪಡೆಯಲು ಸಹಕಾರಿಯಾಗಿದೆ ಎಂದು ಸಹಕಾರಿ ರತ್ನ ಪ್ರಶಸ್ತಿ ಪಡೆದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಂ.ಎಂ ಪರಮೇಶ್ ಹೇಳಿದರು.
ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ಹೊಸನಗರ ಶಾಖೆ ಡಿಸಿಸಿ ಬ್ಯಾಂಕ್ ನೌಕರರ ವರ್ಗದವರಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸನ್ಮಾನಗಳು ನಾವು ಹುಡುಕಿಕೊಂಡು ಹೋಗುವುದಲ್ಲ ನಮ್ಮ ನಿಸ್ವಾರ್ಥ ಸೇವೆ ಮಾಡಿದಾಗ ಅದು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನಾನು ಎಂದಿಗೂ ಯಾವುದೇ ಪ್ರಶಸ್ತಿಗಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡಿಲ್ಲ. ಬಡವರ ಸಹಕಾರಿ ಸದಸ್ಯರ ಏಳಿಗೆಗಾಗಿ ನನ್ನ ಕೈಯಲ್ಲಾದ ಸೇವೆ ಮಾಡಿದ್ದೇನೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡುತ್ತೇನೆ. ನನ್ನ ಜೊತೆ ಎಲ್ಲ ಸಹಕಾರಿ ಸದಸ್ಯರುಗಳು ಹಿತೈಷಿಗಳು ಕೈಜೊಡಿಸಬೇಕೆಂದು ಕೇಳಿಕೊಂಡರು.

ಈ ಸನ್ಮಾನ ಸಮಾರಂಭದಲ್ಲಿ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್.ಪ್ರದೀಪ್, ಜಿಲ್ಲಾ ಯೂನಿಯನ್ ಬ್ಯಾಂಕ್ ಅಧ್ಯಕ್ಷ ವಾಟ್ಗೋಡು ಸುರೇಶ್, ಕ್ಷೇತ್ರಾಧಿಕಾರಿ ಶಿವಕುಮಾರ್, ನಾಗರಾಜ್ ಹೆಚ್.ಇ, ಆನಂದ ಬಿ.ಆರ್, ಆಂಜನೇಯ ಆರ್.ಪಿ, ಮಧುಸೂಧನ್ ಕೆ.ಬಿ, ವೆಂಕಟೇಶ್ ಕೆ, ಗುರುಸಿದ್ಧಸ್ವಾಮಿ, ಸುಖೇಶ್, ಅನ್ನಪೂರ್ಣ ರಂಜಿತ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಜೇನುಕಲ್ಲಮ ಸೌಹಾರ್ದ ಸಹಕಾರಿ ಸಂಘದಿಂದ ಎಂ.ಎಂ ಪರಮೇಶ್ರಿಗೆ ಸನ್ಮಾನ
ಹೊಸನಗರ ; ಹೊಸನಗರದ ಜೇನುಕಲ್ಲಮ್ಮ ಸಹಕಾರಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಬಿ.ಜಿ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರಿ ಸಂಘದ ನಿರ್ದೇಶಕ, ಸಹಕಾರಿ ರತ್ನ ಪ್ರಶಸ್ತಿ ಪಡೆದ ಎಂ.ಎಂ ಪರಮೇಶ್ರನ್ನು ಅದ್ದೂರಿಯಾಗಿ ಸನ್ಮಾನಿಸಿ ಇನ್ನೂ ಹೆಚ್ಚಿನ ಸೇವೆಯನ್ನು ಸಹಕಾರಿ ಕ್ಷೇತ್ರಕ್ಕೆ ನೀಡುವುದರ ಜೊತೆಗೆ ಸಹಕಾರಿ ಸದಸ್ಯರ ಹಿತ ಕಾಪಾಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯೂನಿಯನ್ ಬ್ಯಾಂಕ್ ಅದ್ಯಕ್ಷ ವಾಟಗೋಡು ಸುರೇಶ್ ಹಾಗೂ ಜೇನುಕಲ್ಲಮ್ಮ ಸೌಹಾರ್ದ ಸಹಕಾರಿ ಸಂಘದ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.







