ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ಖಚಿತ ; ವಕೀಲ ವೈ.ಪಿ ಮಹೇಶ್

By malnad tech

Published on:

Spread the love

ಹೊಸನಗರ ; ಅಪ್ರಾಪ್ತೆ ಮೇಲೆ ದೈಹಿಕ ದೌರ್ಜನ್ಯ ನಡೆಸಿದರೆ ಗಂಡು-ಹೆಣ್ಣು ಒಪ್ಪಿಗೆಯಿಂದ ಲೈಂಗಿಕ ಕ್ರಿಯೆಯಲ್ಲಿ ಭಾಗಿಯದರೂ ಅಂತವರ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ 7 ವರ್ಷಗಳ ಕಾಲ ಅಥವಾ ಜೀವಾವಧಿ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಹೊಸನಗರದ ಖ್ಯಾತ ವಕೀಲ ವೈ.ಪಿ. ಮಹೇಶ್‌ ಹೇಳಿದರು.

ಇಲ್ಲಿನ ಜೂನಿಯರ್ ಕಾಲೇಜಿನ ಪ್ರೌಢ ಶಾಲೆಯ ಆವರಣದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರೌಢ ಶಾಲೆ, ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರರವರ ಸಂಯುಕ್ತಾಶ್ರಯದಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ, ಮಕ್ಕಳನ್ನು ಶಿಕ್ಷಕರು ಇವರನ್ನು ಯಾವ ರೀತಿಯಲ್ಲಿಯಾದರೂ ಹೇಗಾದರೂ ಬಳಸಿಕೊಳ್ಳಬಹುದು. ಅವರನ್ನು ಭಾರತ ದೇಶದ ಉತ್ತಮ ಪ್ರಜೆಯನ್ನಾಗಿ ಮಾರ್ಪಡಿಸುವ ಗುಣ ಶಿಕ್ಷಕ ವರ್ಗದವರದ್ದಾಗಿರುತ್ತದೆ ಎಂದು ಹೇಳಿ, ಪ್ರೌಢ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿರುತ್ತದೆ. ಈ ವಯಸ್ಸಿನಲ್ಲಿಯೇ ತಿದ್ದುವ ಜವಾಬ್ದಾರಿ ಶಿಕ್ಷಕರ ಹಾಗೂ ಪೋಷಕರ ಮೇಲಿರುತ್ತದೆ ಎಂದು ಕಿವಿಮಾತು ಹೇಳಿದರು.

ಮಾದಕ ವಸ್ತುಗಳನ್ನು ಸೇವಿಸುವಾಗ ತುಂಬಾ ಸಂತೋಷವಾದರೂ ನಂತರ ಮನುಷ್ಯನ ಮೆದುಳಿನ ಮೇಲೆ ಹಾಗೂ ದೇಹದ ಸಹಜ ಕಾರ್ಯ ವ್ಯತ್ಯಾಸಗೊಳಿಸಿ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಮನುಷ್ಯರ ಮನಸ್ಥಿತಿ ಆಲೋಚನಾ ಶಕ್ತಿ ಮತ್ತು ವರ್ತನೆಗಳನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಮಾದಕ ವಸ್ತುಗಳ ಸೇವನೆ ಮಾಡಬೇಡಿ ಗಾಂಜಾ ಅಫೀಮು, ಕೊಕೇನ್ ಚರಸ್, ಹೆರಾಯಿನ್ ಅಥವಾ ಇತರೆ ವಸ್ತುಗಳಿಗೆ ಸಂಬಂಧಿಸಿದ ಗಿಡಗಳನ್ನು ಬೆಳೆಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಲ್ಲದೇ ಅಂತಹ ಡ್ರಗ್ಸ್ ಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳುವುದು ಸೇವಿಸುವುದು, ಮಾರುವುದು ಖರೀದಿಸುವುದು ಸಾಗಿಸುವುದು ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ನಶೆ ಏರುವ ಟ್ಯಾಬ್ಲೆಟ್ ಅಥವಾ ಯಾವುದೇ ಮಾದಕ ವಸ್ತುಗಳನ್ನು ಸೇವಿಸಬೇಡಿ. ಕ್ಷಣಿಕ ಸುಖ ನೀಡುವ ಮೊಹಕ್ಕೆ ಬಿದ್ದು ಸುಂದರ ಜೀವನ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಸ್ನೇಹಿತರು ಅಥವಾ ಬಂಧು-ಮಿತ್ರರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ತಿಳಿದ ತಕ್ಷಣ ಅವರ ಪಾಲಕರಿಗೆ ವಿಷಯ ಮುಟ್ಟಿಸಿ ಸಾಧ್ಯವಾದರೇ ಪುನಶ್ಚೇತನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದುಶ್ಚಟವನ್ನು ಬಿಡಿಸಲು ಪ್ರಯತ್ನಿಸಿ ಇದರ ಜೊತೆಗೆ ಸಮಾಜವನ್ನು ಮಾದಕ ವಸ್ತುಗಳ ವ್ಯಸನ ಮತ್ತು ಸಾಗಾಟದ ಪಿಡುಗುಗಳಿಂದ ಮುಕ್ತಗೊಳಿಸಲು ಸಹಕರಿಸಿ ಎಂದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ ಮಾತನಾಡಿ, ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್ ವಹಿಸಿದ್ದು ಮುಖ್ಯ ಶಿಕ್ಷಕ ರೇಣುಕೇಶ್, ಮಧುಸೂದನ್, ಜಯಮ್ಮ, ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a comment