ಹೊಸನಗರ ; ಅಂಜನ್ ಟೆಕ್ಸ್‌ಟೈಲ್‌ ಮಾಲೀಕ ರಾಜಮೂರ್ತಿ ನಿಧನ

By malnad tech

Published on:

Spread the love

ಹೊಸನಗರ ; ಇಲ್ಲಿನ ಶಿವಪ್ಪನಾಯಕ ರಸ್ತೆಯಲ್ಲಿರುವ ಅಂಜನ್ ಟೆಕ್ಸ್‌ಟೈಲ್‌ ಮಾಲೀಕ ರಾಜಮೂರ್ತಿ (70) ಮಂಗಳವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದರು.

ಇವರು ಕೊಡಚಾದ್ರಿ ಕಾಲೇಜಿನ ಸಿಡಿಸಿ ಸದಸ್ಯರಾಗಿ, ಕಾಂಗ್ರೆಸ್‌ನ ಕಾಯಂ ಸದಸ್ಯರಾಗಿ ಹಾಗೂ ಹೊಸನಗರ ತಾಲ್ಲೂಕು ನಾಡಹಬ್ಬಗಳ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ ಪ.ಪಂ. ಮಾಜಿ ಅಧ್ಯಕ್ಷೆ ಮೈನಾವತಿ ಹಾಗು ಮಕ್ಕಳು ಮೊಮ್ಮಕ್ಕಳು ಸಹೋದರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ‌.

ಸಂತಾಪ :

ಇವರ ನಿಧನಕ್ಕೆ ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ವಿಜೇಂದ್ರ ಶೇಟ್, ಬಿ.ಎಸ್. ಸುರೇಶ್, ತಾಲ್ಲೂಕು ಬ್ಲಾಕ್ ಅಧ್ಯಕ್ಷ ಚಂದ್ರಮೌಳಿ, ಸದಾಶಿವ ಶ್ರೇಷ್ಠಿ, ಎಂ.ಪಿ ಸುರೇಶ್, ಶ್ರೀನಿವಾಸ್ ಕಾಮತ್ ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.


ಸಂತಾಪ ಸಭೆ ;

ಸರಳ ವ್ಯಕ್ತಿತ್ವ ಯಾರಿಗೂ ಯಾವುದೇ ರೀತಿಯಲ್ಲಿಯೂ ತೊಂದರೆ ನೀಡದೇ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ರಾಜಮೂರ್ತಿಯವರನ್ನು ಕಳೆದುಕೊಂಡಿರುವುದರಿಂದ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಬಡವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಮೌಳಿ ಹೇಳಿದರು.

ಗಾಂಧಿಮಂದಿರ (ಕಾಂಗ್ರೆಸ್ ಕಚೇರಿ) ಆವರಣದಲ್ಲಿ ರಾಜಮೂರ್ತಿಯವರ ಆತ್ಮಕ್ಕೆ ಶಾಂತಿ ಲಭಿಸಲೆಂದು ಸಂತಾಪ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಮಾರು 40 ವರ್ಷ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ವಿವಿಧ ಹುದ್ದೆಯನ್ನು ಅಲಂಕರಿಸಿದವರು ಯಾವುದೇ ಹುದ್ದೆಯಲ್ಲಿದ್ದರೂ ಯಾರಿಗೂ ಎಂದಿಗೂ ತೊಂದರೆ ನೀಡದೆ ಕೊಡಚಾದ್ರಿ ಕಾಲೇಜಿನ ಸಿಡಿಸಿ ಸದಸ್ಯರಾಗಿ ನಾಡಹಬ್ಬಗಳ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದರು.

ಈ ಸಂತಾಪ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರಾದ ಬಿ.ಆರ್ ಪ್ರಭಾಕರ್ ಜಯಶೀಲಪ್ಪ, ಶ್ರೀನಿವಾಸ್ ಕಾಮತ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಟಿ, ಎಂ.ಪಿ ಸುರೇಶ್, ಅಣ್ಣಪ್ಪ, ಮಹಮದ್ ಇಕ್ಬಾಲ್, ಕಳೂರು ಕೃಷ್ಣಮೂರ್ತಿ, ಬಿ.ಎಂ ಶ್ರೀಧರ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಲೋಕೇಶ್, ನೇತ್ರಾವತಿ, ನಾಸೀರ್, ಉಬೇದ್, ಜಯನಗರ ಗುರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a comment