ರಿಪ್ಪನ್ಪೇಟೆ ; 550 ಕೋಟಿ ರಾಮ ತಾರಕಮಂತ್ರ ಜಪ ಕಾರ್ಯಕ್ರಮದ ಅಂಗವಾಗಿ ಕಾಶಿಯಿಂದ ಪರ್ತಗಾಳಿ ಗೋವಾಕ್ಕೆ ತೆರಳುತ್ತಿರುವ ರಥವನ್ನು ರಿಪ್ಪನ್ಪೇಟೆ ಜಿ.ಎಸ್.ಬಿ.ಸಮಾಜ ಭಾಂದವರು ಅದ್ದೂರಿಯಾಗಿ ಸ್ವಾಗತಿಸಿದರು.
120 ಜಪ ಕೇಂದ್ರಗಳ ಮೂಲಕ ಈ ರಥವನ್ನ ಸಮಾಜ ಭಾಂಧವರು ಬಂದಿರುವ ರಥವನ್ನು ಇಲ್ಲಿನ ಜಿ.ಎಸ್.ಬಿ.ಸಮಾಜ ಬಾಂಧವರು ಇಲ್ಲಿನ ವಿನಾಯಕ ವೃತ್ತದಲ್ಲಿ ಸ್ವಾಗತಿಸಿ ಹಣ್ಣು-ಕಾಯಿ ಸಮರ್ಪಿಸಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಮುಂದಿನ ಊರಿಗೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಜಿ.ಎಸ್.ಬಿ ಸಮಾಜದವರು ಭಜನೆಯೊಂದಿಗೆ ಸ್ಥಳದಲ್ಲಿ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದು ವಿಶೇಷವಾಗಿತು.
ಜಿ.ಎಸ್.ಬಿ.ಸಮಾಜದ ಅಧ್ಯಕ್ಷ ಗಣೇಶ್ ಕಾಮತ್ ಸೇರಿದಂತೆ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.







