ನಿಧನವಾರ್ತೆ ; ಕುಬಟಹಳ್ಳಿ ಚನ್ನಕೇಶವ | ಹುಳಿಗದ್ದೆ ನಾಗೇಂದ್ರಪ್ಪಗೌಡ | ಮಾರಿಗುಡ್ಡ ಕೃಷ್ಣಮೂರ್ತಿ

By malnad tech

Published on:

Spread the love

ರಿಪ್ಪನ್‌ಪೇಟೆ ; ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕುಬಟಹಳ್ಳಿ ಗ್ರಾಮದ ಚನ್ನಕೇಶವ ಕುಬಟಹಳ್ಳಿ (76) ತಮ್ಮ ಸ್ವಗೃಹದಲ್ಲಿ ಇಂದು ನಿಧನ ಹೊಂದಿದರು.

ಶಿವಮೊಗ್ಗದ ನ್ಯಾಯಾವಾದಿ ಕೆ.ವೈ.ರಾಮಚಂದ್ರ ಸೇರಿದಂತೆ ಇಬ್ಬರು ಸಹೋದರರು ಇಬ್ಬರು ಸಹೋದರಿಯರು ಹಾಗೂ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.


ಹುಳಿಗದ್ದೆ ನಾಗೇಂದ್ರಪ್ಪಗೌಡ ನಿಧನ !

ರಿಪ್ಪನ್‌ಪೇಟೆ ; ಅಮೃತ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಶಿವಪುರ ಸಮೀಪದ ಹುಳಿಗದ್ದೆ ನಾಗೇಂದ್ರಪ್ಪಗೌಡ (77) ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಹುಳಿಗದ್ದೆ ಅವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.


ಮಾರಿಗುಡ್ಡ ಕೃಷ್ಣಮೂರ್ತಿ ನಿಧನ !

ಹೊಸನಗರ ; ಮಾರಿಗುಡ್ಡದ ನಿವಾಸಿ ಕೃಷ್ಣಮೂರ್ತಿ (91) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನರಾದರು.

ಇವರಿಗೆ ಪತ್ನಿ, ಎಲ್‌ಐಸಿ ಏಜೆಂಟ್ ಪ್ರದೀಪ್‌ಕುಮಾರ್ ಸೇರಿ ಪುತ್ರ, ಓರ್ವ ಪುತ್ರಿ ಅಪಾರ ಬಂಧು-ಬಳಗವನ್ನು ಮೊಮ್ಮಕಳನ್ನು ಬಿಟ್ಟು ಅಗಲಿದ್ದಾರೆ.

ಸಂತಾಪ :

ಇವರ ನಿಧನಕ್ಕೆ ಕಟ್ಟೆ ಸುರೇಶ್, ಸತ್ಯನಾರಾಯಣ, ರಾಮಚಂದ್ರಶೇಟ್, ನಾಗೇಂದ್ರ, ಏಜೆಂಟ್ ನಾಗರಾಜ್, ರಮೇಶ, ಬಾವಿಕಟ್ಟೆ ಸತೀಶ, ಕಟ್ಟೆ ರಾಘವೇಂದ್ರ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅರುಣ್‌ಕುಮಾರ್, ವೇಣುಗೋಪಾಲ್ ರಾಘವೇಂದ್ರ ಶೇಟ್, ಹೆಚ್. ಶ್ರೀನಿವಾಸ್, ಮಾರಿಗುಡ್ಡ ಗೋವಿಂದ, ಶ್ರೀನಿವಾಸ ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.

Leave a comment