ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಗವಟೂರು ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಇಂದು ಕಾರ್ತೀಕ ಅಮವಾಸ್ಯೆಯಂದು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯೊಂದಿಗೆ ದೀಪೋತ್ಸವ ಜರುಗಿತು.
ಕಾರ್ತೀಕ ಮಾಸದಲ್ಲಿ ನಿತ್ಯ ಮನೆಗೊಂದರತೆ ಸರತಿ ಸಾಲಿನಲ್ಲಿ ದೀಪೋತ್ಸವವನ್ನು ಆಚರಿಸುವ ಪದ್ದತಿ ಇದ್ದು ಇಲ್ಲಿನ ರಾಮೇಶ್ವರ ದೇವಸ್ಥಾನದಲ್ಲಿ ಗೋಪೂಜೆಯ ಅಮವಾಸ್ಯೆಯ ದಿನ ಹಗಲು ವೇಳೆಯಲ್ಲಿ ಭಕ್ತರು ಶ್ರದ್ದಾ ಭಕ್ತಿಯಿಂದ ದೀಪೋತ್ಸವವನ್ನು ಆಚರಣೆ ಮಾಡುವ ಮೂಲಕ ಮಾಸಿಕ ಆಚರಣೆಗೆ ಚಾಲನೆ ನೀಡಿದರು.
ಮಲ್ಲಾಪುರದ ಮಂಜಯ್ಯ ನೇತೃತ್ವದಲ್ಲಿ ಶ್ರೀರಾಮೇಶ್ವರ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಹಾಂಗಳಾರತಿಯೊಂದಿಗೆ ದೀಪೋತ್ಸವ ತೀರ್ಥ ಪ್ರಸಾದ ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಗವಟೂರು ರಾಮೇಶ್ವರ ದೇವಸ್ಥಾನ ಸೇವಾ ಸಮಿತಿಯವರು ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಗಳ ಭಕ್ತ ಸಮೂಹ ಪಾಲ್ಗೊಂಡಿದ್ದರು.







