ಹೊಸನಗರ : ಕುಂಟುಭೂತರಾಯ ಹಾಗೂ ಚೌಡಮ್ಮ ದೇವರುಗಳಿಗೆ ದೀಪಾವಳಿ ನೋನಿ ಪೂಜೆ

By malnad tech

Published on:

Spread the love

ಹೊಸನಗರ ; ಹೊಸನಗರದ ಸುತ್ತ-ಮುತ್ತ ಹಾಗೂ ಗ್ರಾಮ ದೇವತೆಗಳಿಗೆ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೋನಿ ಹಬ್ಬ ಆಚರಿಸಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದ್ದು ಅದರಂತೆ ಮಾವಿನಕೊಪ್ಪದ ಸರ್ಕಾರಿ ಕೊಡಚಾದ್ರಿ ಕಾಲೇಜ್ ಸಮೀಪವಿರುವ ಭೂತರಾಯ ಚೌಡಮ್ಮನ ಗುಡಿಯಲ್ಲಿ ಮಾವಿನಕೊಪ್ಪ ಗಣೇಶ್‌ರವರ ನೇತೃತ್ವದಲ್ಲಿ ಅಲ್ಲಿನ ಭಕ್ತಾಧಿಗಳಿಂದ ಪೂಜೆ ಕಾರ್ಯ, ಶಿವಮೊಗ್ಗ ರಸ್ತೆಯಲ್ಲಿರುವ ಮಾಳಿಗೆಮನೆ ಭೂತರಾಯನ ಗುಡಿಯಲ್ಲಿ ರೈತ ರತ್ನಾಕರ್‌ರವರ ನೇತೃತ್ವದಲ್ಲಿ ಅಲ್ಲಿನ ಊರಿನವರ ಸಹಕಾರದೊಂದಿಗೆ ಮಾಳಿಗೆಮನೆ ಭೂತರಾಯನಿಗೆ ಹಾಗೂ ರುದ್ರ ಭೂತರಾಯನಿಗೆ ಪೂಜೆ, ಅದೇ ರೀತಿಯಲ್ಲಿ ಹೊಸನಗರದ ಹೃದಯ ಭಾಗದಲ್ಲಿರುವ ಶ್ರೀಗಣಪತಿ ದೇವಸ್ಥಾನದ ರಸ್ತೆಯಲ್ಲಿ ಅನಾದಿಕಾಲದಿಂದಲೂ ಬೃಹತ್ ವೃಕ್ಷದಲ್ಲಿರುವ ಶ್ರೀ ಕುಂಟಭೂತರಾಯ ಮತ್ತು ಗುಡಿಯಲ್ಲಿರುವ ಶ್ರೀ ಚೌಡೇಶ್ವರಿ ದೇವರುಗಳ ದೀಪಾವಳಿ ನೋನಿಯನ್ನು ಆಚರಿಸಿದರು.

ಕುಂಟು ಭೂತರಾಯನ ನೋನಿಯ ಸಂದರ್ಭದಲ್ಲಿ ಪಾದ್ರಿ ಯಲ್ಲಪ್ಪ ಮತ್ತು ಕುಟುಂಬದವರು, ದೇವರ ಭಕ್ತಾದಿಗಳಾದ ಕಂದಾಯ ಇಲಾಖೆಯ ನಿವೃತ್ತ ನೌಕರ ರಂಗನಾಥ್, ಬ್ಯಾಂಕ್ ಬಾಬಣ್ಣ, ಮಂಜುನಾಥ, ವಿಷ್ಣು, ಶರತ್‌ಕುಮಾರ್, ಎಜೆಂಟ್ ಮಂಜುನಾಥ್, ಸತೀಶ್‌ಕುಮಾರ್ ನಾಗರಾಜ ಇನ್ನೂ ಮುಂತಾದವರು ಉಪಸ್ಥಿತರಿದ್ದು ಪಟ್ಟಣ ಪಂಚಾಯಿ ಪೌರ ನೌಕರ ಚಂದ್ರ, ನಾಗಪ್ಪ ಮತ್ತು ಸಂಗಡಿಗರಿಂದ ಡೊಳ್ಳು ಕುಣಿತ ಹಾಗೂ ಪಟಾಕಿಗಳಿಂದ ಬೃಹತ್ ವಿಜೃಂಭಣೆಯಿಂದ ಊರಿನ ಹಾಗೂ ಪರ ಊರಿನ ಭಕ್ತರ ಸಹಕಾರದಿಂದ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.

Leave a comment